ಹರಿಹರ, ಜು. 17 – ನಗರದ ಹೊಸಭರಂಪುರ ಬಡಾವಣೆಯ ಪುರಾತನ ಕಾಲದ ಶ್ರೀ ನೂರ ಎಂಟು ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಕೆಳಗೆ, ನೀರು ಅಧಿಕ ಪ್ರಮಾಣದಲ್ಲಿ ಬಸಿದು ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕಲ್ಮಶಗಳಿಂದ ಕೂಡಿದ ನೀರಿನಲ್ಲಿ ಓಡಾಡುವಂತಾಗಿದೆ. ನಗರಸಭ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ಪೌರಾಯುಕ್ತ ಐಗೂರು ಬಸವರಾಜ್ ಸೇರಿದಂತೆ ನಗರಸಭೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಹಳೆಯ ಕಾಲದ ಕಲ್ಲುಗಳನ್ನು ತೆರವುಗೊಳಿಸಿ ಹೊಸದಾಗಿ ಕಾಂಕ್ರೀಟ್ ಹಾಕುವುದಕ್ಕೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪೂಜಾರ್ ಈರಣ್ಣ, ರೇವಣಸಿದ್ದಪ್ಪ ಬೆಣ್ಣೆ ಬಸವರಾಜಪ್ಪ, ಹಾವನೂರು ಮಹಾರುದ್ರಪ್ಪ, ಹಿರೇಬಿದರಿ ಕೊಟ್ರೇಶಪ್ಪ, ಜೆಡಿಸ್ ಮುಖಂಡ ಸುರೇಶ್ ಚಂದಪೂರ್ ಮತ್ತಿತರರು ಉಪಸ್ಥಿತರಿದ್ದರು.