ರಾಣೇಬೆನ್ನೂರಿನಲ್ಲಿ ಜೆಸಿಐ ಸಂಸ್ಥೆ ಕಾರ್ಯಕ್ರಮ
ರಾಣೇಬೆನ್ನೂರು, ಜು. 17 – ನಗರದ ಜೆಸಿಐ ಸಂಸ್ಥೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕೃಷಿಯೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ತಾಲ್ಲೂಕಿನ ಕೂನಬೇವು ಗ್ರಾಮದ ಚಂದ್ರಶೇಖರ ಪಾಟೀಲ (ಚಂಸು) ಸನ್ಮಾನಿಸಿ ಗೌರವಿಸಲಾಯಿತು.
ಜೆಸಿ ಅಧ್ಯಕ್ಷರಾದ ಲಕ್ಷ್ಮಿ ಎಡಕೆ, ಶಿವಾನಂದ ಹಲಗೇರಿ, ಪ್ರಭುಲಿಂಗಪ್ಪ ಹಲಗೇರಿ, ಪ್ರಕಾಶ ಗಚ್ಚಿನಮಠ, ರಾಜು ರೇವಣಕರ್. ವೆಂಕಟೇಶ್ ಕಾಕಿ, ಶಿವರುದ್ರಪ್ಪ, ಉಪಾಧ್ಯಕ್ಷ ಪ್ರಕಾಶ ಬನ್ನಿಕೋಡ, ಕುಮಾರ ಬೆಣ್ಣಿ, ಅಶೋಕ ದುರ್ಗದಶೀಮಿ, ಇಸ್ಮಾಯಿಲ್, ಸಾಯಿನಾಥ್ ಗೋಂದಕರ್ ಸೇರಿದಂತೆ ಮತ್ತಿತರರು ಇದ್ದರು.