ಹರಿಹರ, ಜು. 14 – ನಗರದ ಹಳ್ಳದಕೇರಿ ಬಡಾವಣೆಯಲ್ಲಿರುವ ಶ್ರೀ ಹುಚ್ಚೇಶ್ವರ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕವಾಗಿ ನಡೆಸಲಾಗುತ್ತಿರುವ ಉರ್ದು ಶಾಲೆ ತೆರವುಗೊಳಿಸಬೇಕೆಂದು ಹಿಂದೂ ಜಾಗರಣ ವೇದಿಕೆಯ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಹಿಂದೆ ಉರ್ದು ಶಾಲೆ ನಡೆಸುವುದಕ್ಕೆ ಸ್ಥಳದ ಕೊರತೆ ಇದ್ದ ಪರಿಣಾಮ, ದೇವಸ್ಥಾನದ ಸ್ಥಳದಲ್ಲಿ ಉರ್ದು ಶಾಲೆ ನಡೆಸುವುದಕ್ಕೆ ತಾತ್ಕಾಲಿಕವಾಗಿ ಬಡಾವಣೆಯ ಹಿರಿಯರ ಸಮ್ಮುಖದಲ್ಲಿ, ಒಪ್ಪಂದದ ಮೇರೆಗೆ ಸ್ಥಳವನ್ನು ನೀಡಲಾಗಿದೆ. ಆದರೆ ಉರ್ದು ಶಾಲೆಗೆ ಎಪಿಎಂಸಿ ಆವರಣದ ಬಳಿ ಜಾಗವನ್ನು ನಿಗದಿ ಮಾಡಿದ್ದರೂ ಹೋಗುತ್ತಿಲ್ಲ. ಇದರಿಂದಾಗಿ ದೇವಸ್ಥಾನದಲ್ಲಿ ದೇವರಿಗೆ ಧಾರ್ಮಿಕ ವಿಧಿ ವಿಧಾನಗಳು ಹೆಚ್ಚು ನಡೆಯುವುದಕ್ಕೆ ತೊಂದರೆ ಆಗುತ್ತದೆ ಎಂದು ಬಿಇಒ ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎ.ಬಿ. ವಿಜಯಕುಮಾರ್, ಹಿಂದೂ ಜಾಗರಣ ವೇದಿಕೆಯ ದಿನೇಶ್, ಬಸವನಗೌಡ ಹಳ್ಳದಕೇರಿ, ಗಿರೀಶ್, ಸಂತೋಷ ಗುಡಿಮನಿ, ವೀರೇಶ್ ಅಜ್ಜಣ್ಣನವರ್, ಸ್ವಾತಿ ಹನುಮಂತಪ್ಪ, ಮಹೇಶ್ ಮತ್ತಿತರರು ಹಾಜರಿದ್ದರು.