ದಾವಣಗೆರೆ, ಜು. 14- ಬೈಕ್ಗೆ ಹಿಂಬದಿಯಿಂದ ಬುಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟ ಘಟನೆ ಹರಿಹರ ತಾಲ್ಲೂಕು ಬ್ಯಾಲದಹಳ್ಳಿ ಪೆಟ್ರೋಲ್ ಬಂಕ್ ಹತ್ತಿರ ಬುಧವಾರ ರಾತ್ರಿ ನಡೆದಿದೆ.
ನಿಟ್ಟೂರು ಗ್ರಾಮದ ಚಂದ್ರಪ್ಪ (49) ಮೃತ ವ್ಯಕ್ತಿಯಾಗಿದ್ದು, ಇವರು ಸಂಬಂಧಿಯೊಂದಿಗೆ ಬೈಕ್ನಲ್ಲಿ ಬೆಳ್ಳೂಡಿಯಲ್ಲಿ ಗುಳೇನ ಹಬ್ಬಕ್ಕೆ ತೆರಳಿ ವಾಪಾಸ್ ನಿಟ್ಟೂರಿಗೆ ಬರುವಾಗ ಈ ಅಪಘಾತ ನಡೆದಿದೆ. ಮೃತರ ಪುತ್ರ ಬೀರೇಶ್ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.