ಕಕ್ಕರಗೊಳ್ಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಕಕ್ಕರಗೊಳ್ಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ದಾವಣಗೆರೆ, ಜು. 13 – ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವಾಗಿ ಆಚರಿಸಲಾಗುತ್ತಿದ್ದು, ಇದು ಸಂತೋಷ ಹಾಗೂ ಸಾಮರಸ್ಯಗಳ ಸಂಭ್ರಮಾಚರಣೆಯಾಗಿದೆ ಎಂದು ಆಡಳಿತ ವೈದ್ಯಾಧಿಕಾರಿಗಳಾದ ಎಲ್.ಡಿ ವೆಂಕಟೇಶ್ ಹೇಳಿದರು.

ಮಂಗಳವಾರ ಕಕ್ಕರಗೊಳ್ಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳಾ ಕುಟುಂಬ ಯೋಜನೆಗಾಗಿ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳ ಕುರಿತು ಮಾಹಿತಿ ನೀಡಿದರು.                                        

ಡಾ. ಮಾಲಾ .ಎನ್ ಇವರು ಮಾತನಾಡಿ ನುಂಗುವ ಮಾತ್ರೆ, ತುತ್ತು ಗರ್ಭ ನಿರೋಧಕ ಮಾತ್ರೆ, ವಂಕಿ ಅಳವಡಿಕೆ, (ಕಾಪರ್ ಟಿ), ಮೂರು ತಿಂಗಳಿಗೊಮ್ಮೆ ಚುಚ್ಚುಮದ್ದು, ಮಹಿಳಾ ಸಂತಾನ ನಿರೋಧ, ಟುಬ್ಯೆಕ್ಟಮಿ ಶಸ್ತ್ರ ಚಿಕಿತ್ಸೆ. ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ, ಕಾಂಡೊಮ್ ಬಳಕೆ, ಸರಳ ಸುಲಭ ಹೊಲಿಗೆ ರಹಿತ ಹಾಗೂ ನೋವು ಇಲ್ಲದ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಆಯುಷ್ ವೈದ್ಯರಾದ ಡಾ. ರಮೇಶ್ ಬಿ.ಎ. ಹಾಗೂ ಜೆ.ಜೆ.ಎಂ.ಎಂ.ಸಿ ವೈದ್ಯರು ಹಾಗೂ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆ ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!