ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಗೆ ಅರ್ಜಿ

ದಾವಣಗೆರೆ, ಜು.13-  ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟಕ್ಕೆ ಮುಸುಕಿನ ಜೋಳ (ಮಳೆಯಾಶ್ರಿತ) ಬೆಳೆಯನ್ನು ನಿಗದಿಪಡಿಸ ಲಾಗಿದ್ದು, ತಾಲ್ಲೂಕು ಮಟ್ಟಕ್ಕೆ, ದಾವಣಗೆರೆ, ಚನ್ನಗಿರಿ, ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕುಗಳಿಗೆ ಭತ್ತ (ನೀರಾವರಿ) ಮತ್ತು ನ್ಯಾಮತಿ ತಾಲ್ಲೂಕಿಗೆ ಶೇಂಗಾ (ಮಳೆಯಾಶ್ರಿತ) ಹಾಗೂ ಜಗಳೂರು ತಾಲ್ಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ) ಬೆಳೆಗಳನ್ನು ನಿಗದಿಪಡಿಸಲಾಗಿದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು ಮುಂಗಾರು ಹಂಗಾಮಿಗೆ 31ನೇ ಆಗಸ್ಟ್ 2023, ಹಿಂಗಾರು ಹಂಗಾಮಿಗೆ 30ನೇ ನವೆಂಬರ್ 2023 ಆಗಿರುತ್ತವೆ. ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿಗೆ ಪ್ರತ್ಯೇಕವಾಗಿ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.   ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸಲು ಕೋರಿದೆ.

error: Content is protected !!