ಹರಿಹರ ಗ್ರಾಮೀಣ ಪ್ರದೇಶಗಳಿಗೆ ಬಸ್ಸಿನ ವ್ಯವಸ್ಥೆ ಮಾಡಲು ಆಗ್ರಹ

ಹರಿಹರ ಗ್ರಾಮೀಣ ಪ್ರದೇಶಗಳಿಗೆ  ಬಸ್ಸಿನ ವ್ಯವಸ್ಥೆ ಮಾಡಲು ಆಗ್ರಹ

ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

ಹರಿಹರ, ಜು. 13- ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ರೀತಿ  ಬಸ್ ವ್ಯವಸ್ಥೆ ಮಾಡುವಂತೆ,  ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರಿಗೆ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ  ಮನವಿ ಸಲ್ಲಿಸ ಲಾಯಿತು.

ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಗೋವಿಂದ, ಹಲವಾರು ವರ್ಷಗಳಿಂದ ಹರಿಹರದಿಂದ ರಾಣೇಬೆನ್ನೂರು ತಾಲ್ಲೂಕಿನ ಕವಲೆತ್ತು, ಮಾಕನೂರು ಕ್ರಾಸ್, ವಡೇರಾಯನಹಳ್ಳಿ, ಹುಲಿಕಟ್ಟಿ, ನದಿ ಹರಳಹಳ್ಳಿ, ಐರಣಿ. ಹಿರೇಬಿದರಿ ಗ್ರಾಮಗಳ ಮಾರ್ಗಕ್ಕೆ  ಕಡಿಮೆ ಬಸ್ ಸಂಚಾರ ಇದ್ದು, ಈ ಭಾಗ ದಿಂದ ದಿನನಿತ್ಯ ಪ್ರಯಾಣಿಸುವ 200ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜ ನಿಕರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ   ತೊಂದರೆ ಗಳನ್ನು ಅನುಭವಿಸುತ್ತಿದ್ದಾರೆ.   ಒಂದು ವಾರದೊಳಗಾಗಿ  ನಮ್ಮ ಬೇಡಿಕೆ ಈಡೇರದಿದ್ದಲ್ಲಿ, ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ  ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ್,   ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್,  ವಿಜಯ್ ಪೈ, ಮಂಜುನಾಥ್ ಎಂ ಕಿಟ್ಟಿ,  ಶಿವರಾಜ್, ಶಬರೀಶ, ಮಂಜುನಾಥ್ ಎಂ, ಗಣೇಶ ಎಚ್, ಎನ್. ವಿಕಾಸ್, ಎಂ.ಬಿ. ಪ್ರದೀಪ್, ಎಂ.ಬಿ. ನಿಸರ್ಗ, ಬಿ.ಬಿ. ಜ್ಯೋತಿ, ಎಂ.ಬಿ.ಕೆಂಚಮ್ಮ, ಪವಿತ್ರ  ಮತ್ತಿತರರು ಉಪಸ್ಥಿತರಿದ್ದರು.

error: Content is protected !!