`ಪಂಚ್’ಗೆ ಪೈಪೋಟಿ ನೀಡಲು `ಎಕ್ಸ್ ಟರ’

`ಪಂಚ್’ಗೆ ಪೈಪೋಟಿ ನೀಡಲು `ಎಕ್ಸ್ ಟರ’

ದಾವಣಗೆರೆ, ಜು. 13 – ಹುಂಡೈ ಮೋಟಾರ್ ಇಂಡಿಯಾ ಕಂಪನಿಯು ತನ್ನ ಸ್ಟೋರ್ಟಿ ಎಂಟ್ರಿ ಲೆವೆಲ್‍ನ ಎಸ್‍ಯುವಿ ಹುಂಡೈ ಎಕ್ಸ್‍ಟರ್ ಕಾರನ್ನು ನಗರದ ಕೆ.ಜೆ. ಹುಂಡೈ ಶೋರೂಂನಲ್ಲಿ ಇಂದು ಮಾರುಕಟ್ಟೆಗೆ ಪರಿಚಯಿಸಲಾಯಿತು. 

ವಿಶಿಷ್ಟವಾದ ಹೊರ ಭಾಗ, ವಿಶಾಲವಾದ ಒಳಂ ಗಣ ಮತ್ತು ಸುಧಾರಿತ ಸುರಕ್ಷತೆ ತಂತ್ರಜ್ಞಾನ ಹೊಂದಿರುವ ಈ ವಾಹನ ಟಾಟಾ ಮೋಟಾರ್‌ನ ಪಂಚ್‍ಗೆ ಪೈಪೋಟಿ ನೀಡಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಅಫಕ್ ರಾಜ್ವಿ ತಿಳಿಸಿದರು. 

ಎಕ್ಸ್‍ಟರ್‍ನಲ್ಲಿ 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಇಂಜಿನ್ ಇದೆ. ಮ್ಯಾನುಯಲ್ ಟ್ರಾನ್ಸ್‍ಮೀಷನ್ ಹಾಗೂ ಅಟೋಮೆಟಿಕ್ ಟ್ರಾನ್ಸ್‍ಮೀಷನ್ ಆಯ್ಕೆಗಳಲ್ಲಿ ಇದು ಲಭ್ಯವಿದೆ. ಒಂದು ಲೀಟರ್ ಪೆಟ್ರೋಲ್‍ಗೆ 19.4 ಕಿ.ಮೀ. ಮೈಲೆಜನ್ನು ನೀಡಲಿದ್ದು, ಸಿಎನ್‍ಜಿ ಮಾದರಿಯು ಪ್ರತಿ ಕೆ.ಜಿ.ಗೆ 27 ಕಿ.ಮೀ. ಮೈಲೆಜನ್ನು ನೀಡುತ್ತದೆ. 

ಇದರ ಆರಂಭಿಕ ಶೋ ರೂಂ ಬೆಲೆ 5.99 ರೂ. ರಿಂದ ಪ್ರಾರಂಭವಾಗಿ 8.23 ರೂ. ಗಳವರೆಗೆ ಇದೆ ಎಂದು ಶೋರೂಂನ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಅಫಕ್ ರಾಜ್ವಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಸ್ಕಾಂನ ದಾವಣಗೆರೆ ವಿಭಾಗದ ಮೇಲ್ವಿಚಾರಕ ಅಭಿಯಂತರ ಬಿ.ಎಸ್.ಜಗದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  

ಕೆ.ಜೆ.ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ.ಜಾವೀದ್ ಸಾಬ್, ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಅಫಕ್ ರಾಜ್ವಿ, ಸಂಸ್ಥೆಯ ನಿರ್ದೇಶಕ ಕೆ.ಜೆ.ಅಬ್ರಾರ್, ಶ್ರೀಮತಿ ಜಾಹ್ನರ್ ಜಾವೀದ್, ವ್ಯವಸ್ಥಾಪಕರಾದ ಶ್ರೀಮತಿ ಅಂಜಲಿ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!