ಫೋಟೋ, ವಿಡಿಯೋಗ್ರಾಫರ್‌ ಸಂಘಕ್ಕೆ ರಾಜಶೇಖರ್‌, ಮಲ್ಲೇಶ್‌ ಆಯ್ಕೆ

ಫೋಟೋ, ವಿಡಿಯೋಗ್ರಾಫರ್‌ ಸಂಘಕ್ಕೆ ರಾಜಶೇಖರ್‌, ಮಲ್ಲೇಶ್‌ ಆಯ್ಕೆ

ದಾವಣಗೆರೆ, ಜು.12- ತಾಲ್ಲೂಕು ಫೋಟೋ ಮತ್ತು ವೀಡಿಯೋ ಗ್ರಾಫರ್ಸ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲೇಶ್ ಎಚ್.ಪಟೇಲ್ ಹಾಗೂ ಗ್ರಾಮಾಂತರ ವಲಯದ ಅಧ್ಯಕ್ಷರಾಗಿ ಕೊಂಡಜ್ಜಿ ಎಸ್.ರಾಜಶೇಖರ್ ಆಯ್ಕೆಯಾಗಿದ್ದಾರೆ. 

ಸಂಘದ ಕಚೇರಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ವಿಶೇಷ ಸಭೆಯಲ್ಲಿ ಇವರೊಂದಿಗೆ ಸಂಘಟನಾ ಕಾರ್ಯದರ್ಶಿಯಾಗಿ ರಾಜು ಬಿ.ಕುಂದವಾಡ, ಸಹ ಕಾರ್ಯದರ್ಶಿಯಾಗಿ ಡಿ.ರಂಗನಾಥ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಸಂಘದ ಅಧ್ಯಕ್ಷ ಎಂ.ಮನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎಸ್.ಚಂದ್ರಶೇಖರ್, ಮಾಲತೇಶ ಜಾಧವ್, ಖಜಾಂಚಿ ಎ.ಎಸ್.ಗಣೇಶ್, ಜಂಟಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಸಂಚಾಲಕ ಎಚ್.ಎಫ್.ಸಂಜಯ್, ನಿರ್ದೇಶಕರಾದ ಬಿ.ಎಂ.ಪಂಚಾಕ್ಷರಯ್ಯ, ಬಿ.ಕೆ.ಸುರೇಶ್, ಗೌರವ ಸಲಹೆಗಾರರಾದ ಸಂತೋಷ್‌ ದೊಡ್ಮನಿ ಇತರರು ಇದ್ದರು.

error: Content is protected !!