ಮಳೆಗೆ ತಕ್ಕಂತೆ ಬೆಳೆ ನಿರ್ವಹಣೆ ಕ್ರಮ; ರೈತರಿಗೆ ಸಲಹೆ

ಮಳೆಗೆ ತಕ್ಕಂತೆ ಬೆಳೆ ನಿರ್ವಹಣೆ ಕ್ರಮ; ರೈತರಿಗೆ ಸಲಹೆ

ದಾವಣಗೆರೆ, ಜು.12- 2023ರ ಜೂನ್ ಕೊನೆವರೆಗೆ ಕೊರತೆಯಾಗಿ ಉಳಿದಿದ್ದ ಮುಂಗಾರು ಮಳೆ, ಜುಲೈ ಮೊದಲ ವಾರದಲ್ಲಿ ಮಲೆನಾಡು ಭಾಗಗಳಲ್ಲಿ ಜೋರಾಗಿ ಬಂದಿದೆ. ಅರೆ ಮಲೆನಾಡಿನಲ್ಲಿ ತಕ್ಕ ಮಟ್ಟಿಗೆ ಬಂದಿದ್ದರೆ, ಬೆಳವಲದ ಬಹುತೇಕ ಕಡೆ ಕೊರತೆ ಸ್ಥಿತಿಯಲ್ಲಿಯೇ ಮುಂದುವರೆದಿದೆ.   ಈ ಹಿನ್ನೆಲೆಯಲ್ಲಿ, ಬೆಳೆ ನಿರ್ವಹಣೆ ಕುರಿತು ಅನುಸರಿಸಬೇಕಾದ ಕೃಷಿ ಕಾರ್ಯಗಳ ಕುರಿತಂತೆ  ವರದಾ ಕೃಷಿಕರ ವೇದಿಕೆ  ಕೆಲವು ಸಲಹೆ ನೀಡಿದೆ.  ಅವು ಕೆಳಗಿನಂತಿವೆ.   

ಈಗಾಗಲೇ ಬಿತ್ತನೆಯಾದ ಬೆಳೆಗಳಲ್ಲಿ ಎಡೆ ಹೊಡೆಯುವುದು, ಬೋದು ಏರಿಸುವುದು.

ತೇವಾಂಶ ಮಟ್ಟ, ಪಡೆದ / ಪಡೆಯುವ ಮಳೆಗನುಗುಣವಾಗಿ  ಮೇಲ್ಗೊಬ್ಬರ ಕೊಡುವುದು. ಚುಕ್ಕೆ ಲದ್ದಿ ಹುಳು, ರಸ ಹೀರುವ ಕೀಟಗಳ ನಿರ್ವಹಣೆ.

ಹತ್ತಿಯಲ್ಲಿ ಕಾಂಡದ ಮೂತಿ ಹುಳು, ರಸ ಹೀರುವ ಕೀಟಗಳ ಬಾಧೆ, ಸತತ ಮಳೆಯಿಂದ ಹೂವು ಕೊಳೆ ಹತೋಟಿ

ಪೋಷಕಾಂಶಗಳ ಸಿಂಪಡಣೆಯಿಂದ ತೇವದ ಬಾಧೆ ತಡೆಯಲು ಸಾಧ್ಯ.

ಶೇಂಗಾ, ಸೋಯಾ ಅವರೆ ಇತ್ಯಾದಿಗಳಲ್ಲಿ ಬುಡಕೊಳೆ, ಎಲೆ ಚುಕ್ಕೆ ರೋಗ ಹತೋಟಿ (ಸಾಕಷ್ಟು ಕೊಟ್ಟಿಗೆ ಗೊಬ್ಬರ ಬಳಸಿದಲ್ಲಿ ರೋಗ ಬಾಧೆ ಸಾಧ್ಯತೆ ಕಡಿಮೆ).   ಇದುವರೆಗೆ ಬಿತ್ತನೆಯಾಗದ ಮತ್ತು ಮುಂಗಾರಿ ಬೆಳೆ ಬೆಳೆಯುವ ಜಮೀನುಗಳಲ್ಲಿ.. ಬೀಜೋಪ ಚರಿಸಿ ಮೆಕ್ಕೆಜೋಳ, ಸಿರಿಧಾನ್ಯ , ಸೋಯಾ ಅವರೆ ಬಿತ್ತನೆ ಮುಂದುವರೆಸಬಹುದು.

ರಸಗೊಬ್ಬರದ ಪ್ರಮಾಣ ತುಂಬಾ ಹಿಡಿತ ದಲ್ಲಿರಲಿ. ಮೆಣಸಿನಗಿಡದ ಸಿದ್ಧ ಮಡಿಯಿಂದ ಅಗಿಗಳನ್ನು ತಂದು ಟ್ರೈಕೋಡರ್ಮಾ  ಮತ್ತು ಅಜಾಡಿರಕ್ಟಿನ್  (ಅಥವಾ ಕಾರ್ಬಂಡೈಜಿಂ ಮತ್ತು ಕ್ಲೋರ್ ಪೈರಿಫಾಸ್) ಗಳ ದ್ರಾವಣದಲ್ಲಿ ಅದ್ದಿ ನೆಡಬೇಕು. ತಡ ಬಿತ್ತನೆಯಿಂದ ಇಳುವರಿ ಕಡಿಮೆಯಾಗು ವುದರಿಂದ, ಹತ್ತಿ ಬಿತ್ತನೆ ಮುಂದುವರೆಸಬಾರದು.

ಕಳೆ ನಾಶಕ ಬಳಸುವ ಮುನ್ನ ಕಳೆ – ಬೆಳೆ ಹಂತ, ತೇವಾಂಶ ಸ್ಥಿತಿ ಗಮನಿಸಬೇಕು. (ಬಹುತೇಕ ಬಿತ್ತನೆ ನಂತರ ಬಳಸುವ ಕಳೆನಾಶಕ ಗಳು ಕಳೆಗಳು 2-4 ಎಲೆ ಹಂತದಲ್ಲಿರುವಾಗ ಮಾತ್ರ. ಕಾರ್ಯ ಮಾಡುತ್ತವೆ.)

ಬೆಳೆಗಳಲ್ಲಿ ರಸಗೊಬ್ಬರ ಉಗ್ಗಿದರೆ ಅವು ಕಳೆ ಬಾಧೆ ಹೆಚ್ಚಲು ಕಾರಣವಾಗುವವು. ಎಳೆ ಶೆಡ್ಡಿ ಮೂಲಕ ಸಾಲು ಬಿತ್ತನೆಯಿಂದ ಗೊಬ್ಬರಗಳ ಸಮರ್ಥ ಬಳಕೆ ಸಾಧ್ಯ. *  ಶಿಫಾರಸ್ಸಿನಂತೆ ಜಿಂಕ್, ಬೋರಾನ್, ಕ್ಯಾಲ್ಶಿಯಂ, ಗಂಧಕ ಬಳಕೆ ಅತ್ಯಗತ್ಯ. ಅನಗತ್ಯವಾಗಿ ಯೂರಿಯಾ ಬಳಕೆ ಮಾಡಬಾರದು.

ತಜ್ಞರ , ವಿಸ್ತರಣಾ ಕಾರ್ಯಕರ್ತರ, ಯಶಸ್ವಿ ಅನುಭವಸ್ಥರ ಸಲಹೆಗಳಿಗೆ ಆದ್ಯತೆ ಇರಲಿ.

error: Content is protected !!