ಡಾ.ನಿರ್ಮಲಾ ಕೇಸರಿ ದತ್ತಿ ಉಪನ್ಯಾಸ

ದಾವಣಗೆರೆ, ಜು. 12- ದಾವಣಗೆರೆ ಜಿಲ್ಲಾ ಘಟಕ ಮಕ್ಕಳ ವಿಭಾಗದ ಸಹಯೋಗದೊಂದಿಗೆ, ಮಕ್ಕಳ ವಿಭಾಗ  ಎಸ್ಎಸ್ಐಎಂಎಸ್ ಮತ್ತು ರಿಸರ್ಚ್ ವಿಭಾಗ, ಜೆಜೆಎಂಎಂಸಿ ಇವರಿಂದ ಡಾ. ನಿರ್ಮಲಾ ಕೇಸರಿ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ದತ್ತಿ ಉಪನ್ಯಾಸಕರಾಗಿ ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸಸ್‌ ಹಾಗೂ ಐಎಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಪ್ರೊಫೆಸರ್ ಡಾ. ಸಂತೋಷ ಸೋಹನ್, ಡಾ. ಜಿ.ಬಿ. ಬಸವರಾಜ್, ಡಾ. ಗುರುಪ್ರಸಾದ್, ಡಾ. ಪ್ರೀತಿ ಗಲಗಲಿ, ಡಾ. ಕಲ್ಲೇಶ ಹೆಬ್ಬಾಳ, ಡಾ. ಜಿ.ಎಸ್. ಲತಾ, ಡಾ. ಬಸವಂತಪ್ಪ, ಡಾ. ಸುರೇಶ್‌ ಗಂಡಾಪಲ್ಲಿ, ಡಾ. ಆರ್. ಅಶ್ವಿನಿ, ಡಾ. ಛಾಯಾ, ಡಾ. ಮಧು, ಪೂಜಾ ಉಪಸ್ಥಿತರಿದ್ದು, ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.

ಡಾ. ಶರಣಗೌಡ ಪಾಟೀಲ್, ಡಾ. ಅರುಣ್‌ಕುಮಾರ್ ಅಜ್ಜಪ್ಪ, ಡಾ. ವೀರೇಶ್‌ಬಾಬು, ಡಾ. ಭವ್ಯ, ಮಕ್ಕಳ ಖ್ಯಾತ ಹಿರಿಯ ವೈದ್ಯರುಗಳಾದ ಡಾ. ಸಿ.ಆರ್. ಬಾಣಾಪುರ ಮಠ, ಡಾ. ಸುರೇಶ್‌ಬಾಬು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಾ. ಬಿ.ಎಸ್. ಪ್ರಸಾದ್ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಡಾ. ಕಾಳಪ್ಪನವರ್ ಸ್ವಾಗತಿಸಿ, ನಿರ್ಮಲಾ ಕೇಸರಿ ಅವರ ಕಾರ್ಯವೈಖರಿ ಹಾಗೂ ಅವರಿಗೆ ಮಕ್ಕಳ ಬಗ್ಗೆ ಇದ್ದ ಅಪಾರ ಪ್ರೀತಿ, ಸಾಮಾಜಿಕ ಕಳಕಳಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಡಾ. ಸಹನ ರವಿಕುಮಾರ್ ಹಾಗೂ ಡಾ.ಮಾಳವಿಕ ಕಾರ್ಯಕ್ರಮ ನಿರೂಪಿಸಿದರು. ಡಾ. ಚಂದ್ರಶೇಖರ ಗೌಳಿ ವಂದಿಸಿದರು.

error: Content is protected !!