ಅಂತರರಾಷ್ಟ್ರೀಯ ಯೋಗಗುರು ಪರಶುರಾಮಪ್ಪಗೆ ಪ್ರಶಸ್ತಿ

ಅಂತರರಾಷ್ಟ್ರೀಯ ಯೋಗಗುರು ಪರಶುರಾಮಪ್ಪಗೆ ಪ್ರಶಸ್ತಿ

ದಾವಣಗೆರೆ, ಜು. 12 – ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮೊನ್ನೆ ನಡೆದ  ಕಾರ್ಯಕ್ರಮದಲ್ಲಿ ನಗರದ ಅಂತರರಾಷ್ಟ್ರೀಯ ಯೋಗ ಗುರು ಎನ್. ಪರಶುರಾಮಪ್ಪ ಅವರಿಗೆ ಲೈಫ್ ಅಚೀವ್‌ಮೆಂಟ್ ಅವಾರ್ಡ್‌9 ಪ್ರದಾನ ಮಾಡಲಾಯಿತು.

9ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಎಸ್.ಜಿ.ಎಸ್. ಅಂತರರಾಷ್ಟ್ರೀಯ ಯೋಗ ಫೆಡರೇ ಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ, ಕರ್ನಾಟಕ ಯೋಗಾಸನ ಸ್ಫೋರ್ಟ್ಸ್‌9 ಅಸೋಸಿ ಯೇಷನ್ ಸಹಯೋಗದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯೋಗ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಪರಶುರಾಮಪ್ಪ ಅವರನ್ನು ಯೋಗ ಕ್ಷೇತ್ರದಲ್ಲಿನ  ಸಾಧನೆಯನ್ನು  ಗುರುತಿಸಿ ಈ ಅವಾಡ್  ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವಜನ ಸೇವಾ ಕ್ರೀಡಾ ಸಚಿವ ಎನ್. ನಾಗೇಂದ್ರ, ಕೆಎಸ್ ಎಂಎಸ್ ಸಿ ವ್ಯವಸ್ಥಾಪಕ ನಿರ್ದೇಶಕರು, ಎಸ್ ಜಿಎಸ್ ಅಂತರರಾಷ್ಟ್ರೀಯ ಯೋಗಾಸನ ಸ್ಫೋರ್ಟ್ಸ್‌9 ಫೆಡರೇಶನ್ ನಿರ್ದೇಶಕ ಎಸ್. ರಂಗಪ್ಪ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿಮಯ ಅಧ್ಯಕ್ಷ ಹಾಗೂ ಕರ್ನಾಟಕ ಯೋಗಾ ಸನ ಸ್ಫೋರ್ಟ್ಸ್‌9 ಅಸೋಸಿಯನ್ ಉಪಾಧ್ಯಕ್ಷ ಎಂ.ಲಕ್ಷ್ಮೀನಾರಾಯಣ, ಕೆ.ಎಸ್. ಶಕುಂತಲಾ ದೇವಿ, ಸುರೇಶ್ ಕುಮಾರ್, ಡಾ.ಎಂ. ನಿರಂಜನ ಮೂರ್ತಿ, ಎಜಿಕೆ ಜಯಪ್ರಕಾಶ್ ಸೇರಿದಂತೆ ಇನ್ನಿತರರು ಇದ್ದರು.

error: Content is protected !!