ಹಡಪದ ಅಪ್ಪಣ್ಣ ಸಮಾಜ ಶಿಕ್ಷಣ, ಸಂಘಟನೆಗೆ ಒತ್ತು ನೀಡಬೇಕು : ಶ್ರೀ ಅನ್ನದಾನಿ ಭಾರತಿ ಸ್ವಾಮೀಜಿ

ಹಡಪದ ಅಪ್ಪಣ್ಣ ಸಮಾಜ ಶಿಕ್ಷಣ, ಸಂಘಟನೆಗೆ ಒತ್ತು ನೀಡಬೇಕು : ಶ್ರೀ ಅನ್ನದಾನಿ ಭಾರತಿ ಸ್ವಾಮೀಜಿ

ಮಲೇಬೆನ್ನೂರು, ಜು.12- ಹಡಪದ ಅಪ್ಪಣ ಸಮಾಜದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ, ಅವರು ಉನ್ನತ ಸ್ಥಾನಕ್ಕೆ ಹೋಗುವಂತೆ ಮಾಡ ಬೇಕೆಂದು ಹಡಪದ ಅಪ್ಪಣ್ಣ ಸಮಾ ಜದ ಗುರುಗಳಾದ ಶ್ರೀ ಅನ್ನದಾನಿ ಭಾರತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಹಮ್ಮಿ ಕೊಂ ಡಿದ್ದ ವಚನಕಾರ ಹಡಪದ ಅಪ್ಪಣ್ಣ ಅವರ 889ನೇ ಜಯಂತಿ ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಸಮಾಜದಲ್ಲಿರುವ ಮೂಢನಂ ಬಿಕೆ, ಮೌಢ್ಯ, ಅಸ್ಪೃಶ್ಯತೆ ಹೋಗಲಾ ಡಿಸಲು ಶಿಕ್ಷಣ, ಸಂಘಟನೆ ಪರಿಹಾರ ವಾಗಿದೆ ಎಂದು ಸ್ವಾಮೀಜಿ ಸಮಾಜ ದವರಿಗೆ ಅರಿವು ಮೂಡಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಶಶಿಧರ್‌, ತಾಲ್ಲೂಕು ಅಧ್ಯಕ್ಷ ಡಾ. ಉಮಾಪತಿ ಮಾತನಾಡಿದರು.

ಸಮಾಜದ ಮಲೇಬೆನ್ನೂರು ಘಟಕದ ಅಧ್ಯಕ್ಷ ಕೆ.ಪಿ. ನವೀನ್‌, ಗೌರವಾಧ್ಯಕ್ಷ ಬಸವರಾಜಪ್ಪ, ವೀರಭದ್ರಪ್ಪ, ಅಜ್ಜಪ್ಪ, ಹರಿಹರದ ಹಾಲೇಶ್‌, ಕುಂಬಳೂರಿನ ಭೀಮಪ್ಪ, ಕಾರ್ಯದರ್ಶಿ ಕೆ.ಬಿ. ಮಂಜುನಾಥ್‌, ಉಪಾಧ್ಯಕ್ಷ ಅಮ ರೇಶ್‌, ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್‌ ಸೇರಿದಂತೆ ಮಲೇ ಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹಡಪದ ಅಪ್ಪಣ್ಣ ಸಮಾಜದವರು ಭಾಗವಹಿಸಿದ್ದರು.

error: Content is protected !!