ದಾವಣಗೆರೆ,ಜು.11- ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ವತಿಯಿಂದ ಸೈಕಲ್ ಸವಾರಿ ಮಾಡಲು ಪ್ರೋತ್ಸಾಹಿಸಲಾಗುವುದು. ಕೆಲವು ದಶಕಗಳ ಹಿಂದೆ ಸೈಕಲ್ ಹಲವು ವಿಧಗಳಲ್ಲಿ ಜೀವನದ ಅವಿಭಾಜ್ಯ ಅಂಗವಾಗಿತ್ತು. ಈಗ ಅದು ಅಳಿವಿನಂಚಿಗೆ ಬಂದಿದೆ. ಪೆಟ್ರೋಲ್ ದರ ದುಬಾರಿ ರೂ.104 ಆಗಿ, ಬಡವರಿಗೆ ನಿಲುಕದ ವಸ್ತುವಾಗಿದೆ. ಅಲ್ಲದೆ ಪೆಟ್ರೋಲ್ ವಾಹನಗಳಲ್ಲಿ ದೈಹಿಕ ಶ್ರಮವಿಲ್ಲದೆ ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿ ಹಾಗೂ ಬಡವರ ಸಣ್ಣ ಆರ್ಥಿಕ ಉಳಿತಾಯಕ್ಕಾಗಿ ಬೆಂಬಲ ನೀಡಲು ಕರುಣಾ ಟ್ರಸ್ಟ್ ಸೈಕಲ್ ಕೊಡಿಸಲು ಬಯಸುತ್ತಿದೆ. ಬಡವರ ಆರ್ಥಿಕ ಪರಿಸ್ಥಿತಿಗೆ ಅನುಸಾರವಾಗಿ ಸೈಕಲ್ ಖರೀದಿಸಲು ಹಣಕಾಸಿನ ನೆರವು ನೀಡ ಲಾಗುವುದು.ಸಂಪರ್ಕಿಸಿ: 8310520002/ 9110455199. ಅಲ್ಲದೇ, ಈ ಕಾರ್ಯಕ್ರಮಕ್ಕೆ ಮನೆಯಲ್ಲಿ ಉಪಯೋಗಿಸದೇ ಇರುವ ಸೈಕಲ್ಲು ಗಳನ್ನು ಟ್ರಸ್ಟಿಗೆ ನೀಡಿದರೆ ಅವುಗಳನ್ನು ರಿಪೇರಿ ಮಾಡಿಸಿ ಬಡವರಿಗೆ ನೀಡಲಾಗುವುದು ಎಂದು ಟ್ರಸ್ಟ್ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ.
February 24, 2025