ಹಂಪಿ, ಜು. 10 – ಲಂಬಾಣಿ ಸಮುದಾಯದ ಮಹಿಳೆಯರು ಹಂಪಿಯಲ್ಲಿ ಕಸೂತಿ ಕಲೆಗಾರಿಕೆ ಮೂಲಕ ಹೊಸ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಜಿ20 ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯ ಸಂದರ್ಭದಲ್ಲಿ ಲಂಬಾಣಿ ಮಹಿಳೆಯರು ರೂಪಿಸಿದ ಕಸೂತಿ ಬಟ್ಟೆಗಳನ್ನು ಪ್ರದರ್ಶಿಸಲಾಯಿತು. ಸಂಡೂರಿನ ಕಲಾ ಕೇಂದ್ರದ 450 ಮಹಿಳೆಯರು ರೂಪಿಸಿರುವ ಈ ಕಸೂತಿ ಬಟ್ಟೆಗಳು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿವೆ.