ಶ್ರಮಿಕ ವರ್ಗಕ್ಕೆ ಬಜೆಟ್‌ನಲ್ಲಿ ಅನ್ಯಾಯ: ಸಿಐಟಿಯು

ದಾವಣಗೆರೆ, ಜು. 10- ಕರ್ನಾಟಕದ ಕಾರ್ಮಿಕ ವರ್ಗದ ದೃಷ್ಟಿಯಿಂದ ಇದು ಅನ್ಯಾಯದ ಬಜೆಟ್‌ ಆಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಆಭಿಪ್ರಾಯಪಟ್ಟಿದೆ.

ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದು ಮಾಡುವುದಾಗಿ ಘೋಷಿಸಿ ಮತ್ತೊಂದು ಕಡೆ ಅದೇ ಬಿಜೆಪಿ ಸರ್ಕಾರ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳ ಮಾಡಿತ್ತು. ಹೆಚ್ಚಳದ ಅವಧಿಯನ್ನು ಸರ್ಕಾರ ರದ್ದು ಮಾಡಬೇಕಿತ್ತು. 

ಅಸಂಘಟಿತ ಕಾರ್ಮಿಕರನ್ನು  ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ. ಮನೆಗೆಲಸ, ಹಮಾಲಿ, ಆಟೋ, ಟೈಲರ್, ಬೀಡಿ ಉದ್ಯಮ, ಬೀದಿ ಬದಿಯ ಸಣ್ಣ ವ್ಯಾಪಾರಿಗಳು, ಮೆಕ್ಯಾನಿಕ್‌ಗಳು, ವಿಮಾ ಪ್ರತಿನಿಧಿಗಳು ಸೇರಿದಂತೆ ಅಸಂಘ ಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲವಾಗಿದೆ.

ಕಾಂಗ್ರೆಸ್ ಚುನಾವಣೆಗೂ ಮುನ್ನ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದ್ದ ವೇತನ ಹೆಚ್ಚಳದ ಭರವಸೆ ಈಡೇರಿಲ್ಲ. ಒಳ ಗುತ್ತಿಗೆ ನೌಕರರ ಖಾಯಮಾತಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಸಿಐಟಿಯುಸಿ ಹೇಳಿದೆ.

ಸಿದ್ಧರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಕೆಲವು ಸ್ವಾಗತಾರ್ಹ ಅಂಶಗಳು ಮಾತ್ರ ಇದ್ದು. ಒಟ್ಟಾರೆ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಆನಂದರಾಜ್ ಆರೋಪಿಸಿದ್ದಾರೆ.

error: Content is protected !!