ದಾವಣಗೆರೆ, ಜು.10- ನಗರದ ಡಾ. ಸಿ.ವಿ. ರಾಮನ್ ಕಾಲೇಜ್ ಆಫ್ ಅಡ್ಮಿನಿಸ್ಟ್ರೇಷನ್ ಅಂಡ್ ನೆಟ್ವರ್ಕ್ ಸೈನ್ಸಸ್ಸ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಹಮ್ಮಿಕೊಳ್ಳಲಾಗಿತ್ತು. ಅನೇಕ ಪ್ರವೇಶ ಪರೀಕ್ಷೆಗಳ ನಂತರ ಬಿಕಾಂ, ಬಿಸಿಎ, ಸಾಫ್ಟ್ವೇರ್ ಡೆವಲಪರ್ ವಿಭಾಗದಿಂದ ಒಟ್ಟು 15 ವಿದ್ಯಾರ್ಥಿಗಳು ಟೆಕ್ ಮಹಿಂದ್ರಾ ಅಂಡ್ ಆಸ್ಟಿರ್ ಐಟಿ ಸಲ್ಯೂಶನ್ಸ್ ಕಂಪನಿಗೆ ಆಯ್ಕೆಯಾಗಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ಬೋಧಕ ವರ್ಗ ಅಭಿನಂದಿಸಿದೆ.
January 20, 2025