ದಾವಣಗೆರೆ, ಜು. 10- ನಗರದ ನಂದಗೋಕುಲ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ಘಟಕವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಶ್ರೀಮತಿ ಬಿ. ಅನಸೂಯ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೆಹನಾಬಾನು ನಾಸಿಕ, ಹಿರಿಯ ಶಿಕ್ಷಕ ಬಸವರಾಜ್ ಹಾಗೂ ಸ್ಕೌಟ್ ಮಾಸ್ಟರ್ ಮುಸ್ತಾಫ್ ರಜಾ ಮತ್ತು ಸ್ಕೌಟ್ ಕ್ಯಾಪ್ಟನ್ ಶ್ರೀಮತಿ ನಳಿನ ಕೆ.ಬಿ, ಗೈಡ್ ಕ್ಯಾಪ್ಟನ್ ಮಾನಸ ಕೆ., ಕಬ್ಸ್ ಕ್ಯಾಪ್ಟನ್ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಬುಲ್ ಬುಲ್ಸ್ ಕ್ಯಾಪ್ಟನ್ ಶ್ರೀಮತಿ ಸೋನಿಕಾ ಮತ್ತು ಶಾಲಾ ವ್ಯವಸ್ಥಾಪಕರಾದ ಶ್ರೀಮತಿ ಪುಷ್ಪ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.