ವ್ಯಸನಿಗಳಲ್ಲಿ ಶೇ.10 ರಷ್ಟು ಆತ್ಮಹತ್ಯೆ ಪ್ರಕರಣ

ವ್ಯಸನಿಗಳಲ್ಲಿ ಶೇ.10 ರಷ್ಟು ಆತ್ಮಹತ್ಯೆ ಪ್ರಕರಣ

ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ  ಸಂತೋಷ್ ಕುಮಾರ್ 

ದಾವಣಗೆರೆ, ಜು.10- ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮ ಅಭಿವೃದ್ಧಿ  ಯೋಜನೆ ಮತ್ತು  ಅಖಿಲ ಕರ್ನಾಟಕ ಜನ ಜಾಗೃತಿ  ವೇದಿಕೆ  ವತಿಯಿಂದ  ಕಿತ್ತೂರು ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅನಧಿಕೃತ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು  ಉದ್ಘಾ ಟಿಸಿ ಮಾತನಾಡಿದ  ಸೈಕ್ಯಾಟ್ರಿಕ್ ಸೋಶಿಯಲ್ ವರ್ಕರ್  ಸಂತೋಷ್ ಕುಮಾರ್,    ಪ್ರತಿ ವರ್ಷವೂ 5.70 ಲಕ್ಷ ಜನ ಮಾದಕ ವ್ಯಸನಕ್ಕೀಡಾಗಿ ಸಾವನ್ನಪ್ಪುತ್ತಿದ್ದಾರೆ  ಮತ್ತು ಭಾರತದಲ್ಲಿ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ  7.5 ಕೋಟಿ ಮಾದಕ ವ್ಯಸನಿಗಳಿದ್ದಾರೆ, ಪ್ರತಿ 10 ಜನರು ಮಾದಕ ವ್ಯಸನಗಳಿಗೆ ಬಲಿಯಾಗಿ  ಆತ್ಮಹತ್ಯೆ ಮಾಡಿಕೊ ಳ್ಳುತ್ತಿದ್ದಾರೆ. ಪ್ರತಿ 10 ಜನರಲ್ಲಿ ಇಬ್ಬರು  16 ವರ್ಷಕ್ಕಿಂತ ಕಡಿಮೆ ವಯೋಮಾನದವರೇ   ಆಗಿದ್ದಾರೆ ಎನ್ನುವುದೇ ದುರಂತ  ಎಂದರು.  ತಂಬಾಕು,  ಸಿಗರೇಟು, ಮದ್ಯಪಾನ  ಇನ್ನಿತರ  ಮತ್ತು    ಅನಧಿಕೃತವಾಗಿ ಸಿಗುವಂತಹ ಗಾಂಜಾ,  ಹೆರಾಯಿನ್,  ಅಫೀಮು, ಚರಸ್, ಕೊಕೇನ್, ಬಂಗ್, ನಿಕೋಟಿನ್, ಚುಚ್ಚುಮದ್ದು  ಸೇವನೆಯಲ್ಲಿ  ನಗರ ಮತ್ತು ಕೊಳಗೇರಿ   ಯುವಕರೇ ಹೆಚ್ಚು.  ಈ ತರಹದ  ಮಾದಕ ವಸ್ತುಗಳನ್ನು ಬಳಸುವುದರಿಂದ ಮೆದುಳಿನ ಮೇಲೆ ಪರಿಣಾಮ ಬೀರಿ ದೈಹಿಕವಾಗಿ, ಮಾನಸಿಕವಾಗಿ  ದುಷ್ಪರಿಣಾಮಗಳು ಉಂಟಾಗುವುದು  ಎಂದರು.   

ಈ ಸಂದರ್ಭದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ  ಸಮನ್ವಯ ಅಧಿಕಾರಿ  ಪ್ರತಿಭಾ ಮತ್ತು ಪುಷ್ಪ ಸೇರಿದಂತೆ  ಇನ್ನಿತರರು ಹಾಜರಿದ್ದರು .

error: Content is protected !!