ಹರಿಹರದಲ್ಲಿ ಅಕ್ರಮ ಪ್ಲಾಸ್ಟಿಕ್ ಬಳಕೆ : ದಂಡ

ಹರಿಹರದಲ್ಲಿ ಅಕ್ರಮ ಪ್ಲಾಸ್ಟಿಕ್ ಬಳಕೆ : ದಂಡ

ಹರಿಹರ, ಜು.10- ನಗರಸಭೆಯ ಪೌರಾಯುಕ್ತ ಐಗೂರು ಬಸವರಾಜ್ ಅವರ ಸೂಚನೆ ಮೇರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಗರದಲ್ಲಿರುವ ಅಂಗಡಿಯವರು ಅಕ್ರಮವಾಗಿ ಬಳಸುತ್ತಿದ್ದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ವಶಪಡಿಸಿಕೊಂಡು 4500 ರೂ. ದಂಡವನ್ನು ಹಾಕಿದ್ದಾರೆ.

ಈ ವೇಳೆ ಆರೋಗ್ಯ ಅಧಿಕಾರಿ ರವಿಪ್ರಕಾಶ್ ಮಾತನಾಡಿ, ನಗರದಲ್ಲಿ ಬಹುತೇಕ ಹೋಟೆಲ್, ಬೇಕರಿ, ಬಟ್ಟೆ, ತರಕಾರಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ಮಾಡುತ್ತಿದ್ದು, ಅವುಗಳನ್ನು ಬಳಸದಂತೆ
ಸಾಕಷ್ಟು ಬಾರಿ ಎಚ್ಚರಿಕೆಯನ್ನು ಕೊಟ್ಟಿದ್ದರೂ ಸಹ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆಯನ್ನು ನಿಲ್ಲಿಸದ ಕಾರಣ ಇಂದು ಅಂಗಡಿಗಳಿಗೆ ತೆರಳಿ ಅವುಗಳನ್ನು ವಶಪಡಿಸಿಕೊಂಡು ದಂಡದ ಹಣವನ್ನು ಅವರ ಮೊಬೈಲ್ ಮೂಲಕ ನೇರವಾಗಿ ಸರ್ಕಾರದ ಖಜಾನೆಯ ಖಾತೆಗೆ ಜಮಾ ಮಾಡಲಾಗಿದೆ. 

ಇದರಿಂದಾಗಿ ವ್ಯಾಪಾರಸ್ಥರಿಗೆ ನಮ್ಮ ಮೇಲೆ ಯಾವುದೇ ರೀತಿಯ ಅನುಮಾನ ವ್ಯಕ್ತಪಡಿಸುವುದಕ್ಕೆ ಅವಕಾಶ ಇರದಂತಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಫೇದಾರ್ ಹನುಮಂತಪ್ಪ, ವಿರೂಪಾಕ್ಷ, ಮಂಜು, ಶಿವಕುಮಾರ್, ಮಂಜುನಾಥ್ ಇತರರು ಹಾಜರಿದ್ದರು.

error: Content is protected !!