ಎಐಡಿವೈಓ ಸಂಸ್ಥಾಪನಾ ದಿನಾಚರಣೆ ಸೂಕ್ತಿ ಪ್ರದರ್ಶನ, ಪುಸ್ತಕ ಮಾರಾಟ

ಎಐಡಿವೈಓ ಸಂಸ್ಥಾಪನಾ ದಿನಾಚರಣೆ  ಸೂಕ್ತಿ ಪ್ರದರ್ಶನ, ಪುಸ್ತಕ ಮಾರಾಟ

ದಾವಣಗೆರೆ, ಜು. 10-  ಎಐಡಿವೈಓ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸೂಕ್ತಿ ಪ್ರದರ್ಶನ ಹಾಗೂ ಪುಸ್ತಕ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘಟನೆಯ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಸಂಘಟನೆ ಸ್ಥಾಪನೆಯಾಗಿ 58 ವರ್ಷಗಳು ಕಳೆದಿವೆ. ಇವತ್ತಿನವರೆಗು ಹೋರಾಟದ ಹಾದಿಯಲ್ಲೇ ಸಾಗುತ್ತಾ ಯುವಜನರನ್ನು ಅನ್ಯಾಯದ ವಿರುದ್ಧ ಹೋರಾಟಕ್ಕೆ ಅಣಿಗೊಳಿಸಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಗಳಾದ ಭಗತ್‌ಸಿಂಗ್, ನೇತಾಜಿ, ಸೂರ್ಯಸೇನ್ ಅವರ ತ್ಯಾಗ, ಬಲಿದಾನ, ಆಶೋತ್ತರ ಎತ್ತಿಹಿಡಿಯಲು ಸಂಘಟನೆ ಕಟ್ಟಲಾಯಿತು ಎಂದು ಹೇಳಿದರು.

ಮಾರ್ಕ್ಸ್‌ವಾದಿ ಚಿಂತಕ ಶಿವದಾಸ್ ಘೋಷ್ ಅವರು ಕಟ್ಟಿದ ಯುವ ಸಂಘಟನೆ ಯನ್ನು ಉನ್ನತ ನೀತಿ, ನೈತಿಕತೆ ಮತ್ತು ಸಂಸ್ಕೃತಿ  ಹಾದಿಯಲ್ಲಿ ಬೆಳೆಸಿದರು ಎಂದರು.

ಯುವಜನರ ಚಳವಳಿಗೆ ಬೇಕಾದ  ಸಮಾಜವಾದಿ ವಿಚಾರವನ್ನು  ಬಿಟ್ಟು ಹೋಗಿದ್ದಾರೆ. ಹಾಗಾಗಿ ನಾವು ಜಾತಿ ತಾರತಮ್ಯ ದೂರವಿರಿಸಿ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಸಾಂಸ್ಕೃತಿಕ ಅಧಃಪತನ, ಮಹಿಳೆಯರ ಮೇಲಿನ ದೌರ್ಜನ್ಯ ಇತರೆ ಅನ್ಯಾಯಗಳ ವಿರುದ್ಧ ಯುವಕರು ಸಿಡಿದೆದ್ದು ಹೋರಾಟಗಳನ್ನು ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.

ಸಂಘಟನೆಯ ಪದಾಧಿಕಾರಿಗಳಾದ ಹರಿಪ್ರಸಾದ್, ಅನಿಲ್ ಕುಮಾರ್, ರಾಜು, ದಿಲೀಪ್, ಚೇತನ್ ಹಾಗೂ ಯುವಕರು-ಸಾರ್ವಜನಿಕರು ಭಾಗವಹಿಸಿದ್ದರು.

error: Content is protected !!