ರಾಣೇಬೆನ್ನೂರು, ಜು.10- ನಗರದ ಸ್ನೇಹ ದೀಪ ಅಂಗ ಅಂಗ ವಿಕಲರ ಸಂಸ್ಥೆ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಾಥಮಿಕ ಶಾಲಾ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಜರುಗಿತು.
ಶಾಸಕ ಪ್ರಕಾಶ್ ಕೋಳಿವಾಡ ಶಾಲಾ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ, ಸಂಸ್ಥೆಯ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿ ಸುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆಯ ಧರ್ಮದರ್ಶಿಗಳಾದ ಕೆ.ಜಿ. ಮೋಹನ್ ಹಾಗೂ ಡಾ. ಪಾಲ್ಮುದ್ದ, ಗಣ್ಯರಾದ ಡಾ. ಗಿರೀಶ್ ಎಸ್. ಕೆಂಚಪ್ಪನವರ್, ಸುಧೀರ್ ಕುರುವತ್ತಿ, ಶ್ರೀಮತಿ ಶೋಭಾ ಮಠಪತಿ, ಶ್ರೀಮತಿ ವಸಂತ ಹುಲ್ಲತ್ತಿ ಮತ್ತಿತರರು ಪಾಲ್ಗೊಂಡು, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂಬ ಭರವಸೆಯನ್ನು ತುಂಬಿದರು.
ಇದೇ ಸಂದರ್ಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರು ಕಂಪ್ಯೂಟರ್ ತರಬೇತಿಯಲ್ಲಿ ತೇರ್ಗಡೆಯಾದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಸ್ಮಾರ್ಟ್ ಗ್ಲಾಸ್ ವಿತರಣೆ ಮಾಡಿದರು.