ನಿವೇಶನ – ಮನೆ ಕೊಡಿಸುವುದಾಗಿ ವಂಚನೆ : ಆರೋಪಿ ಪೊಲೀಸರ ಅತಿಥಿ

ನಿವೇಶನ – ಮನೆ ಕೊಡಿಸುವುದಾಗಿ ವಂಚನೆ : ಆರೋಪಿ ಪೊಲೀಸರ ಅತಿಥಿ

ಹರಿಹರ, ಜು.8- ನಗರದ ನಂದಿ ಕನ್‌ಸ್ಟ್ರಕ್ಷನ್‌ನ ಏಜೆನ್ಸಿ ಮಾಲೀಕ ಮಂಜುನಾಥ್ ಎಂಬುವವರು ಗ್ರೀನ್ ಸಿಟಿ ಲೇಔಟ್‌ನಲ್ಲಿ ನಿವೇಶನ ಕೊಡುವುದಾಗಿ ಹಾಗೂ ಮನೆ ಕಟ್ಟಿಸಿಕೊಡುವುದಾಗಿ ಮುಂಗಡ ಹಣ ಪಡೆದು, ನಿವೇಶನ ಮತ್ತು ಮನೆಯನ್ನು ಕಟ್ಟಿಸಿಕೊಡದೇ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದರ ಆರೋಪದ ಮೇಲೆ ಮಂಜುನಾಥ್ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ, ನ್ಯಾಯಾಂಗದ ವಶಕ್ಕೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಗ್ರೀನ್ ಸಿಟಿ ಲೇಔಟ್‌ನಲ್ಲಿ ನಂದಿ ಕನ್‌ಸ್ಟ್ರಕ್ಷನ್‌ ಏಜೆನ್ಸಿ ಮಾಲೀಕ ಮಂಜುನಾಥ್ ನಾಗಪ್ಪ ತಂದೆ ಭೀಮಪ್ಪ, ನಾಗರಾಜ್ ತಂದೆ ಬಿ.ಕೆ. ಪರ್ವತಪ್ಪ, ರೋಹಿತ್ ಕುಮಾರ್ ತಂದೆ ಶಂಕ್ರಪ್ಪ, ಅಶೋಕ್ ಕುಮಾರ್ ತಂದೆ ಹನುಮೇಗೌಡ್ರು, ಶಿವಾಜಿರಾವ್ ತಂದೆ ಫಿರೋಜಿರಾವ್ ಎಂಬುವವರ ಬಳಿ ದಿನಾಂಕ 4.12.2019 ರಂದು ನಗರದ ಎಂ.ಕೆ.ಇ.ಟಿ. ಶಾಲೆ ಮುಂಭಾಗದಲ್ಲಿರುವ ಗ್ರೀನ್ ಸಿಟಿಯ `ಎ’ ಬ್ಲಾಕ್ ಸೈಟ್ ನಂ. 134, 137, 241 ಸೈಟ್ 4066 ಚದರ ಮೀಟರ್ ಒಂದು ಅಡಿಗೆ 1150 ರೂ.ನಂತೆ 46 ಲಕ್ಷದ 75 ಸಾವಿರದ 900 ರೂ. ಹಣವನ್ನು ಕ್ರಯಕ್ಕೆ ಪಡೆದು, ಸದರಿ ಕ್ರಯಕ್ಕೆ ಬಾಬ್ತು 29 ಲಕ್ಷದ 79 ಸಾವಿರ ನಗದು ಹಣವನ್ನು ಪಡೆದು, ನಿವೇಶನ ಮತ್ತು ಮನೆಯನ್ನು ಕಟ್ಟಿಸಿಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಇವರುಗಳು ಠಾಣೆಯಲ್ಲಿ ದೂರು  ನೀಡಿದ್ದರಿಂದ ಇಲ್ಲಿನ ಪೊಲೀಸ್ ಅಧಿಕಾರಿ ವರ್ಗದ ವರು ಮತ್ತು ಸಿಬ್ಬಂದಿಗಳು ಇಷ್ಟು ದಿನ ಗಳಿಂದ ತಲೆ ಮರಿಸಿಕೊಂಡು ಓಡಾ ಡುತ್ತಿದ್ದ, ಮಂಜುನಾಥ್ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 

ನಂದಿ ಕನ್‌ಸ್ಟ್ರಕ್ಷನ್‌ನ ಏಜೆನ್ಸಿ ಮಾಲೀಕ ಮಂಜುನಾಥ್ ಅವರ ಮೇಲೆ ಇತ್ತೀಚೆಗೆ ಇನ್ನೊಂದು ಪ್ರಕರಣ ಕೂಡ ದಾಖಲಾಗಿದ್ದು, ಅದರಲ್ಲಿ 57 ಜನರಿಂದ ನಿವೇಶನ ಕೊಡುವುದಾಗಿ ಹಣವನ್ನು ಕಟ್ಟಿಸಿ ಕೊಂಡು ಅವರಿಗೆ ನಿವೇಶನ ಕೊಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಎರಡು ಪ್ರಕರಣದಲ್ಲಿ ಬಹುತೇಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವಂತಹ 20 ಹೆಚ್ಚು ಸಿಬ್ಬಂದಿಗಳು ಮತ್ತು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಣೆ ಮಾಡುವಂತಹ ಅನೇಕ ಸಿಬ್ಬಂದಿ ಗಳ ಹಣವನ್ನು ಹೆಚ್ಚು ಪಡೆದುಕೊಂಡು ಈ ರೀತಿಯಲ್ಲಿ ವಂಚನೆ ಮಾಡಿರುವುದು ಇತಿಹಾಸ ಎನ್ನಲಾಗಿದೆ.

error: Content is protected !!