ದಾವಣಗೆರೆ, ಜು. 6- ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ `ಸಮಾನ ನಾಗರಿಕ ಸಂಹಿತೆ’ ಕರಡು ಪ್ರತಿ ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ದೆಹಲಿಯ ಲಾ ಮಿಷನ್ಗೆ ಮುಸ್ಲಿಂ ಬಾಂಧವ್ಯ ವೇದಿಕೆ ಅರ್ಜಿ ಸಲ್ಲಿಸಿದೆ. ಪ್ರಧಾನಮಂತ್ರಿ ಮತ್ತು ಸಚಿವರು ವೇದಿಕೆಗಳಲ್ಲಿ ಚುನಾವಣಾ ಲಾಭವನ್ನು ಗಮನದಲ್ಲಿಟ್ಟುಕೊಂಡು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ ಅದರ ಕುರಿತಾದ ಅಧಿಕೃತ ಪ್ರಸ್ತಾವನೆಯಾಗಲೀ ಅಥವಾ ಕರಡು ಪ್ರತಿ ಯಾಗಲೀ ಸಾರ್ವಜನಿಕವಾಗಿ ಪ್ರಕಟಿಸುತ್ತಿಲ್ಲ. ಸಮಾಜದಲ್ಲಿ ಸಮುದಾಯ ಗಳ ನಡುವೆ ಸೌಹಾರ್ದವಿರಬೇಕು ಎಂಬುದು ವೇದಿಕೆಯ ಉದ್ದೇಶ. ಆದರೆ ಸರ್ಕಾರದ ನಿರ್ಧಾರದಿಂದಾಗಿ ಸಮುದಾಯಗಳಲ್ಲಿ ಗೊಂದಲ ಉಂಟಾಗಿದೆ. ಈ ಗೊಂದಲವನ್ನು ನಿವಾರಿಸಿ, ಸರ್ಕಾರ ಉದ್ದೇಶಿಸಿರುವ ನೀತಿಯ ಸ್ವರೂಪ ತಿಳಿಯಲು ಲಾ ಕಮೀಷನ್ಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಷಾ ತಿಳಿಸಿದ್ದಾರೆ.
January 10, 2025