ಧರ್ಮಸ್ಥಳ ಯೋಜನೆ ಗ್ರಾಮೀಣರ ಜೀವನಾಡಿ : ನಾಗನಗೌಡ್ರು

ಧರ್ಮಸ್ಥಳ ಯೋಜನೆ ಗ್ರಾಮೀಣರ ಜೀವನಾಡಿ : ನಾಗನಗೌಡ್ರು

ಮಲೇಬೆನ್ನೂರು, ಜು. 5-ಹೊಳೆಸಿರಿಗೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಐದೃಷ್ಟಿ ಕಣ್ಣಿನ ಆಸ್ಪತ್ರೆಯ ಯೂನಿಟ್ ಮ್ಯಾನೇಜರ್ ಎಂ. ಮುರುಳಿ, ಹೊಳೆ ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನಕುಮಾರ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನ ಜಾಗೃತಿ ವೇದಿಕೆ ಸದಸ್ಯರೂ ಆದ ಹಿರಿಯ ಮುತ್ಸದ್ಧಿ ಎನ್.ಜಿ. ನಾಗನಗೌಡ್ರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀ ಣ ಜನರ ಜೀವನಾಡಿಯಾಗಿ ಬೆಳೆದಿದೆ ಎಂದು ಹೇಳಿದರು. ಮಲೇಬೆನ್ನೂರು ಯೋಜನಾ ಧಿಕಾರಿ ವಸಂತ್ ದೇವಾಡಿಗ, ಗ್ರಾ.ಪಂ. ಅಧ್ಯಕ್ಷೆ ಕಾವ್ಯ ಮಂಜು ನಾಥ್, ಸೌಭಾಗ್ಯ, ಜಿಲ್ಲಾ ಸಿಎಸ್‌ಸಿ ನೋಡಲ್ ಅಧಿಕಾರಿ ನಂಜುಂಡ ಪ್ರಸಾದ್, ಸಿರಿಧಾನ್ಯ ಮೇಲ್ವಿಚಾರಕ ಸಂತೋಷ್, ಜ್ಞಾನವಿ ಕಾಸ್ ಸಮ ನ್ವಯಾಧಿಕಾರಿ ಸವಿತಾ, ಒಕ್ಕೂಟದ ಅಧ್ಯಕ್ಷರಾದ ಗಂಗಾಧರ್, ಯಶೋಧ, ವಲಯ ಮೇಲ್ವಿಚಾರಕ ರಂಗಸ್ವಾಮಿ ಸೇರಿದಂತೆ ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು ಭಾಗವಹಿಸಿದ್ದರು

error: Content is protected !!