ಮಲೇಬೆನ್ನೂರಿನಲ್ಲಿ ಹಡಪದ ಅಪ್ಪಣ್ಣ ಜಯಂತಿ

ಮಲೇಬೆನ್ನೂರಿನಲ್ಲಿ ಹಡಪದ ಅಪ್ಪಣ್ಣ ಜಯಂತಿ

ಮಲೇಬೆನ್ನೂರು, ಜು. 3- ಇಲ್ಲಿನ ಪುರಸಭೆ ಹಾಗೂ ನಾಡ ಕಛೇರಿ ಮತ್ತು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ವಚನಕಾರ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್, 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಹಡಪದ ಅಪ್ಪಣ್ಣ ಅವರು ಸಮಾಜದ ಅಂಕು-ಡೊಂಕುಗಳನ್ನು ತೊಡೆದು ಹಾಕಲು ಶ್ರಮಿಸಿದರು. ಮೌಢ್ಯವನ್ನು ಹೋಗಲಾಡಿ ಸಲು ಬಸವಣ್ಣನವರು ಪ್ರತಿದಿನ ಬೆಳಿಗ್ಗೆ ಅವರನ್ನು ಭೇಟಿ ಮಾಡಿದ ನಂತರವೇ ಬೇರೆಯವರನ್ನು ಭೇಟಿ ಮಾಡುತ್ತಿದ್ದರು. ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಡಪದ ಅಪ್ಪಣ್ಣ ಸಮಾಜದವರು ತಮ್ಮ ಕಾಯಕವನ್ನು  ಶ್ರದ್ಧೆಯಿಂದ ಮಾಡುತ್ತಾ, ನವ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಸುರೇಶ್ ಹೇಳಿದರು.

ಉಪ ತಹಶೀಲ್ದಾರ್ ಆರ್. ರವಿ ಅವರು ಎಲ್ಲರಿಗೂ ಶುಭಾಶಯ ಕೋರಿದರು. ಪುರಸಭೆ ಸದಸ್ಯರಾದ ಕೆ.ಜಿ. ಲೋಕೇಶ್, ಸಾಬೀರ್ ಅಲಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಿಂದಾಗಿ ಮೂಢನಂಬಿಕೆಗಳಲ್ಲಿ ಕಳೆದು ಹೋಗಿದ್ದ ಜನರು, ಇಂದು ಪ್ರಜ್ಞಾವಂತರಾಗಿ ಸಮಾಜದಲ್ಲಿ ಮುಂದೆ ಬರುತ್ತಿದ್ದಾರೆ ಎಂದರು.

ಸಮಾಜದ ಮುಖಂಡ ಕೆ.ಬಿ. ಚನ್ನಬಸಪ್ಪ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕೋರಿದರು.

ಪುರಸಭೆ ಸದಸ್ಯರಾದ ಖಲೀಲ್, ನಯಾಜ್, ಭೋವಿ ಶಿವು, ಟಿ. ಹನುಮಂತಪ್ಪ, ಷಾ ಅಬ್ರಾರ್, ಮಾಜಿ ಸದಸ್ಯರಾದ ಪಿ.ಆರ್. ರಾಜು, ಯುಸೂಫ್, ಪುರಸಭೆ ಅಧಿಕಾರಿಗಳಾದ ದಿನಕರ್, ಹಾಲೇಶಪ್ಪ, ಪ್ರಭು, ಶಿವರಾಜ್, ಶ್ರೀಮತಿ ಮಮ್ತಾಜ್, ನಾಡಕಛೇರಿಯ ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಕಛೇರಿಯ ಶ್ರೀಮತಿ ಪುಷ್ಪ ಹಿರೇಮಠ್, ಶ್ರೀಮತಿ ಶಿಲ್ಪ, ಬಸವರಾಜ್, ಹಡಪದ ಅಪ್ಪಣ್ಣ ಸಮಾಜದ ಕೆ.ಬಿ. ನವೀನ್‌ಕುಮಾರ್, ಕೆ. ವೀರಭದ್ರಪ್ಪ, ಕೆ. ಅಂಬರೀಶ್, ಬಿ.ಕೆ. ನಾಗರಾಜ್, ವಿರೂಪಾಕ್ಷಪ್ಪ, ಜಿಗಳಿಯ ಕೆ.ಬಿ. ಮಂಜುನಾಥ್, ಕೆ.ಜಿ. ವಿರೂಪಾಕ್ಷಿ, ಕೆ.ಎಸ್. ಮಾಲತೇಶ್, ಕೆ.ಪಿ. ಅಭಿಷೇಕ್, ಎಂ.ಎನ್. ಕುಮಾರ್, ಸವಿತಾ ಸಮಾಜದ ಅಧ್ಯಕ್ಷ ಕೆ.ಬಿ. ಶ್ರೀನಿವಾಸ್, ವಾಲ್ಮೀಕಿ-ನಾಯಕ ಸಮಾಜದ ಪಾಳೇಗಾರ್ ನಾಗರಾಜ್, ಪ್ರಗತಿ ಪರ ರೈತ ಹೆಚ್.ಜಿ. ವಿರೂಪಾಕ್ಷಪ್ಪ ಸೇರಿದಂತೆ,  ಇನ್ನೂ ಅನೇಕರು ಭಾಗವಹಿಸಿದ್ದರು.  

error: Content is protected !!