ಚುನಾವಣೆಗಳು ಇಂದು ಸಂವಿಧಾನ ಬಾಹಿರವಾಗಿ ನಡೆಯುತ್ತಿದ್ದು, ಹಣ ತನ್ನ ಸಾಮ್ರಾಜ್ಯ ಸ್ಥಾಪಿಸಿದಂತಾಗಿ ಭ್ರಷ್ಟಾಚಾರ ತುಂಬಿದೆ. ಭ್ರಷ್ಟಾಚಾರ ರಹಿತ ಹಾಗೂ ಕಡ್ಡಾಯ ಮತದಾನದ ಅವಶ್ಯಕತೆ ಕಂಡುಬರುತ್ತಿದ್ದು, ಈ ಕುರಿತು ಚಿಂತನೆ ನಡೆಸಲು ನಗರದ ಆದಿಶಕ್ತಿ ಸಭಾಭವನದಲ್ಲಿ ಸಂಜೆ 4 ಗಂಟೆಗೆ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರು ಸಭೆ ಕರೆದಿದ್ದಾರೆ. ರೈತರು, ರೈತ ಕಾರ್ಮಿಕರು, ವರ್ತಕರು, ಹಮಾಲರು, ಸ್ತ್ರೀ ಶಕ್ತಿ ಸಂಘಟನೆ, ವಿದ್ಯಾರ್ಥಿ-ವಿದ್ಯಾರ್ಥಿನಿ ಯರು, ಮಹಿಳೆಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಎಲ್ಲರೂ ಪಕ್ಷ ಭೇದ ಮರೆತು ಇಂದಿನ ಈ ಸಭೆಗೆ ಆಗಮಿಸಿ ತಮ್ಮ ಸಲಹೆಗಳನ್ನು ನೀಡಿ, ದೇಶದ ಅಭಿವೃದ್ದಿಗೆ ಮಾರಕವಾಗುವ ಈ ಪಿಡುಗನ್ನು ಕಳೆಯುವ ಪ್ರಯತ್ನಕ್ಕೆ ತಾವುಗಳು ಕೈಜೋಡಿಸುವಂತೆ ಕೋಳಿವಾಡ ಮನವಿ ಮಾಡಿದ್ದಾರೆ.
November 26, 2024