ದಾವಣಗೆರೆ, ಜು. 2- ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವರದಿಗಾರರ ಕೂಟದ ಸದಸ್ಯರಿಗೆ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆಯಿಂದಲೇ ಪಂದ್ಯಗಳನ್ನು ಆರಂಭಿಸಿದ ಕ್ರೀಡಾಪಟುಗಳು ಅತ್ಯಂತ ಹುರುಪಿನಿಂದ ಪಾಲ್ಗೊಂಡಿದ್ದರು. ಆದರೆ ವರುಣನ ಅವಕೃಪೆಯಿಂದಾಗಿ ಆಟಕ್ಕೆ ಅಡ್ಡಿಯಾಯಿತು.
ಪ್ರತಿ ತಂಡದಲ್ಲಿ ಹದಿನಾರು ಸದಸ್ಯರಿರುವ ನಾಲ್ಕು ತಂಡಗಳನ್ನು ರಚಿಸಿ, ಐದು ಓವರ್ಗಳಿಗೆ ಪಂದ್ಯವನ್ನು ನಿಗದಿಗೊಳಿಸಿ, ಲೀಗ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಯಿತು.
ಮಧ್ಯಾಹ್ನ ಜಿಲ್ಲಾ ಪೊಲೀಸ್ ತಂಡ ಹಾಗೂ ಪತ್ರಕರ್ತರ ತಂಡದ ನಡುವಿನ ಪಂದ್ಯಕ್ಕೆ ಎಸ್ಪಿ ಡಾ. ಕೆ ಅರುಣ್ ಚಾಲನೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್,
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಡಿವೈಎಸ್ಪಿ ಪ್ರಕಾಶ್, ಮಲ್ಲೇಶ್ ದೊಡ್ಡಮನಿ, ಹಿರಿಯ ಪತ್ರಕರ್ತರಾದ
ಸದಾನಂದ ಹೆಗಡೆ, ಎಂ.ಬಿ. ನವೀನ್, ಸಿದ್ಧಯ್ಯ ಹಿರೇಮಠ, ನಾಗರಾಜ್ ಬಡದಾಳ್, ಮಂಜುನಾಥ್ ಪಿ. ಕಾಡಜ್ಜಿ, ಎ. ಫಕೃದ್ಧೀನ್, ಡಾ. ಸಿ. ವರದರಾಜ್, ಮಧು ನಾಗರಾಜ್, ಎನ್.ವಿ. ಬದರಿನಾಥ್, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವರದಿಗಾರರ ಕೂಟದ ಸದಸ್ಯರು ಪಾಲ್ಗೊಂಡಿದ್ದರು.