ದಾವಣಗೆರೆ, ಜೂ.30- ರಾಜ್ಯದಾದ್ಯಂತ ಇಂದು ತೆರೆ ಕಂಡಿರುವ ಕನ್ನಡ ಚಲನಚಿತ್ರ `ಬೆಂಗಳೂರು ಬಾಯ್ಸ್’ ಚಿತ್ರಕ್ಕೆ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಚಿನ್ ಗಣೇಶ್ ಅವರು ಮುಖ್ಯ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.
ಸಚಿನ್ ಅವರು ಈ ಹಿಂದೆ ನಿರ್ಮಾಣ ವಾದ ಅದ್ದೂರಿ ಚಿತ್ರಗಳಾದ ಅಂಬರೀಶ್-ಸುದೀಪ್ ಅಭಿನಯದ `ಅಂಬಿ ನಿಂಗೆ ವಯಸ್ಸಾಯ್ತು’ ಮತ್ತು ಅನಂತನಾಗ್-ದಿಗಂತ್‌ರವರ `ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಚಿತ್ರಗಳ ಸಂಕಲನಕಾರರಾಗಿ ಒಳ್ಳೆಯ ಕೆಲಸ ಮಾಡಿದ್ದರು. ಅಲ್ಲದೇ ಇತ್ತೀಚೆಗೆ ಬಿಡುಗಡೆಯಾದ ತುಳು ಚಿತ್ರ `ಲಾಸ್ಟ್ ಬೆಂಚ್’ ಚಿತ್ರಕ್ಕೂ ಸಂಕಲನ ಮಾಡಿದ್ದರು. ಚಿತ್ರವು ದಕ್ಷಿಣ ಕನ್ನಡದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.
`ಬೆಂಗಳೂರು ಬಾಯ್ಸ್’ ಚಿತ್ರವನ್ನು ವಿ ಮೇಕರ್ಸ್ ಸಂಸ್ಥೆ ನಿರ್ಮಾ ಣ ಮಾಡಿದ್ದು, 90ರ ದಶಕದ ಸೂಪರ್ ಹಿಟ್ ಚಿತ್ರಗಳಾದ `ಅಂತ’, `ರಣ ಧೀರ’, `ಓಂ’, ಹಾಗೂ `ಎ’ ಚಿತ್ರಗಳ ನಾಯಕರ ರೀತಿಯಲ್ಲಿಯೇ ಅಭಿನ ಯಿಸಿರುವ ಚಿತ್ರದ ನಾಯಕರು ಉತ್ತಮವಾಗಿ ರಂಜಿಸಿ ದ್ದಾರೆ. ಸಚಿನ್, ನಗರದ ಸೌತ್ ಇಂಡಿಯನ್ ಬ್ಯಾಂಕ್ ಅಧಿಕಾರಿ ಗಣೇಶ್ ಅವರ ಪುತ್ರ.