ದಾವಣಗೆರೆ, ಜೂ. 26- ಶ್ರೀಮತಿ ಗೌರಮ್ಮ ಮೋತಿ ಪಿ. ರಾಮರಾವ್ ಚಾರಿಟೇ ಬಲ್ ಟ್ರಸ್ಟ್ ವತಿ ಯಿಂದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂ ತರ ಜಿಲ್ಲೆಯ ಶ್ರೇಷ್ಠ ಸಾಹಿತಿಗಳಿಗೆ ಕೊಡುವ `ಮಹಾಲಿಂಗರಂಗ’ ಪ್ರಶಸ್ತಿಯನ್ನು 2022 ಹಾಗೂ 2023 ರ ಸಾಲಿಗೆ ನೀಡುವ ಕುರಿತಾಗಿ ಟ್ರಸ್ಟ್ ಮುಖ್ಯಸ್ಥ ಮೋತಿ ಪರಮೇಶ್ವರ ರಾವ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಭೇಟಿ ಮಾಡಿ ಮಹಾಲಿಂಗರಂಗ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯ ವಿವರ ನೀಡಿದರು.
ಮೋತಿ ಪರಮೇಶ್ವರ ರಾವ್ ಅವರು ಆಯ್ಕೆ ಸಮಿತಿಯ ತೀರ್ಮಾನಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಕೀರ್ತಿಶೇಷ ಮೋತಿ ರಾಮರಾವ್ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಮಹಾಲಿಂಗರಂಗ ಪ್ರಶಸ್ತಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ಸಾಹಿತ್ಯ ಲೋಕಕ್ಕೆ ಕೊಡುವ ಗೌರವವೆಂದು ಪ್ರಶಂಸೆ ವ್ಯಕ್ತಪಡಿಸಿದ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಈ ಪ್ರೋತ್ಸಾಹಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತ್ಯ ಬಳಗ ಮತ್ತು ಎಲ್ಲ ಕನ್ನಡದ ಮನಸ್ಸುಗಳ ಪರವಾಗಿ ಟ್ರಸ್ಟಿನ ಅಧ್ಯಕ್ಷರನ್ನು ಮತ್ತು ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಉಪಸ್ಥಿತರಿದ್ದರು.