ದಿದ್ದಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ರೇಖಾ ರಾಜ್‌ಕುಮಾರ್

ದಿದ್ದಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ರೇಖಾ ರಾಜ್‌ಕುಮಾರ್

ಜಗಳೂರು, ಜೂ26- ತಾಲ್ಲೂಕಿನ‌ ದಿದ್ದಿಗಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರೇಖಾ ರಾಜ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.  ಇತ್ತೀಚೆಗೆ ತೆರವಾದ ಸಾಮಾನ್ಯ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಂಚಮ್ಮನಾಗ್ತಿಹಳ್ಳಿ ಗ್ರಾಮದ ರೇಖಾ ರಾಜ್‌ಕುಮಾರ್    ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. 

ಲೋಕೋಪಯೋಗಿ ಎಇಇ ರಾಮಚಂದ್ರಪ್ಪ ಚುನಾವಣೆ ಅಧಿಕಾರಿಯಾಗಿ  ಕಾರ್ಯ ನಿರ್ವಹಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ವೀರಭದ್ರಯ್ಯ, ಜಯಶೀಲಾ ಪ್ರಕಾಶ್, ಪ್ರಶಾಂತ್, ನಾಗಪ್ಪ, ರಾಧಮ್ಮ, ಪವಿತ್ರ ಆನಂದ್, ಮಹೇಶಪ್ಪ, ಬಾಲರಾಜ್, ವೆಂಕಟೇಶ್, ಗುತ್ತೆಮ್ಮ, ಸಾವಿತ್ರ ಶೇಖರ್, ಮುಕುಂದಪ್ಪ, ಮಾರಮ್ಮ, ಹೇಮಕ್ಕ ರಾಮಣ್ಣ, ಸೌಭಾಗ್ಯಮ್ಮ, ನೀಲಮ್ಮ, ರೇಣುಕಮ್ಮ, ಪ್ರಕಾಶ್, ಮುಖಂಡರಾದ ಬಸವರಾಜ್ ದಿದ್ದಿಗೆ, ಟಿ.ಪಿ.ನಾಗರಾಜ್, ಆನಂದ್  ಇದ್ದರು.

error: Content is protected !!