ದಾವಣಗೆರೆ, ಜೂ.26- ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ವತಿಯಿಂದ 2023ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಜಿಲ್ಲೆಯ ಪಂಚಮಸಾಲಿ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ `ಸ್ವಾಭಿಮಾನ ಪ್ರತಿಭಾ ಪುರಸ್ಕಾರ’ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳು ಸಮಾಜದ ಕಛೇರಿ ನಂ. 477, 1ನೇ ಮಹಡಿ, 5ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಚೇತನಾ ಹೋಟೆಲ್ ರಸ್ತೆ, ಪಿ.ಜೆ.ಬಡಾವಣೆ ಅಥವಾ ಸಮಾಜದ ಅಂತ ರ್ಜಾಲ ವೆಬ್‍ಸೈಟ್ www.panchama sali.org ನಲ್ಲಿ ಅರ್ಜಿಯನ್ನು ಪಡೆದು, ದಿನಾಂಕ 01-07-2023 ರೊಳಗಾಗಿ ಸಲ್ಲಿಸ ಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ (08192) 222008 ಸಂಪರ್ಕಿಸಬಹುದು.