ದಾವಣಗೆರೆ, ಜೂ.26- ಸ್ಥಳೀಯ ಶಾಂತಿ ನಗರ 3ನೇ ಕ್ರಾಸ್, ರಿಂಗ್ ರೋಡ್ ಮೇನ್, ಯಲ್ಲಮ್ಮ ನಗರದ ಹತ್ತಿರದಲ್ಲಿ ಹಸಿರು ದಳ ಹಾಗು ಜಿಲ್ಲಾ ಅಲೆಮಾರಿ ಗೋಸಾಯಿ ಸಮುದಾಯ ಒಕ್ಕೂಟದ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರುಗಳು, ನರ್ಸ್‌ಗಳು ಉಚಿತವಾಗಿ ಸೇವೆ ಸಲ್ಲಿಸಿದರು. ಗಣ್ಯ ನಾಗರಿಕರಾದ ಸೋಮನಾಥ ಪಡಿಯಾರ್, ಶಿವಕುಮಾರ್ ಗೋಸಾವಿ, ಎಂ.ಜಿ. ಗೋಸಾವಿ, ಭರತ್ ಗೋಸಾವಿ, ಶ್ರೀನಿವಾಸ್ ಗೋಸಾವಿ, ಶಿವರಾಜ್ ಗೋಸಾವಿ ಮತ್ತಿತರರು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು.
ಶಾಂತಿ ನಗರದಲ್ಲಿ ಉಚಿತ ಆರೋಗ್ಯ ಶಿಬಿರ
