ಹರಿಹರದಲ್ಲಿ ಗೃಹ ಜ್ಯೋತಿ ನೋಂದಣಿಗೆ ಸರ್ವರ್ ಕಾಟ

ಹರಿಹರದಲ್ಲಿ ಗೃಹ ಜ್ಯೋತಿ ನೋಂದಣಿಗೆ ಸರ್ವರ್ ಕಾಟ

ಹರಿಹರ, ಜು. 25- ಗೃಹ ಜ್ಯೋತಿ ಯೋಜನೆಗೆ ಸಾರ್ವಜನಿಕರು ಹೆಸರನ್ನು ನೋಂದಾಯಿಸಿಕೊಳ್ಳಲು ಸರ್ವರ್ ಸಮಸ್ಯೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ನಗರದ ಕರ್ನಾಟಕ ಒನ್ ಮತ್ತು ಸೇವಾ ಕೇಂದ್ರದಲ್ಲಿ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಭೇಟಿ ಕೊಟ್ಟ ಸಮಯದಲ್ಲಿ ಗ್ರಾಹಕರ ನಾಲ್ಕು ಮತ್ತು ಐದು ದಾಖಲೆಗಳನ್ನು ಪೂರ್ಣಗೊಳಿಸುತ್ತಿದ್ದಂತೆ ಸರ್ವರ್ ಬ್ಯುಸಿ ಎಂದು ತೋರಿಸುತ್ತದೆ. ತದನಂತರ ಎರಡು, ಮೂರು ಗಂಟೆಯವರೆಗೆ ಕಾದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಒನ್ ಕೇಂದ್ರದ ಮಾಲೀಕ ಚೇತನ ಮೂರ್ಕಲ್ ಮಾತನಾಡಿ, ರಾಜ್ಯಾದ್ಯಂತ ಸರ್ವರ್ ಲೋಡ್ ಹೆಚ್ಚಾದಾಗ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರದ ಕಡೆಯಿಂದಲೇ ಈ ಸಮಸ್ಯೆಗೆ ಪರಿಹಾರ ಸಿಗಬೇಕಿದೆ ಎಂದರು.

ಕರ್ನಾಟಕ ಒನ್ ಮಾಲೀಕ ರವಿಕುಮಾರ್ ಮಾತನಾಡಿ, ನಮ್ಮ ಕೇಂದ್ರದಲ್ಲಿ ಸಾರ್ವಜನಿಕರಿಗೆ ನೆರವಾಗಲು 10 ಕಂಪ್ಯೂಟರ್ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರದಿಂದಲೂ ಸರಿಯಾದ ವ್ಯವಸ್ಥೆ ಮಾಡಿದಾಗ ಮಾತ್ರ ಸಮಸ್ಯೆ ಇರುವುದಿಲ್ಲ ಎಂದರು.

error: Content is protected !!