ಜಗತ್ತಿನಲ್ಲಿ 14 ಲಕ್ಷ ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಸೇವಾ ಸಂಸ್ಥೆ ಲಯನ್ಸ್ ಕ್ಲಬ್

ಜಗತ್ತಿನಲ್ಲಿ 14 ಲಕ್ಷ ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಸೇವಾ ಸಂಸ್ಥೆ ಲಯನ್ಸ್ ಕ್ಲಬ್

ಮಲೇಬೆನ್ನೂರಿನ ಲಯನ್ಸ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಾಜೀವ್ ಕೋಟಿಯನ್

ಮಲೇಬೆನ್ನೂರು, ಜೂ. 25 – ಲಯನ್ಸ್ 317 ಸಿ ಜಿಲ್ಲೆಯಲ್ಲೇ ಮಲೇಬೆನ್ನೂರು ಲಯನ್ಸ್ ಕ್ಲಬ್ ತನ್ನ ಅತ್ಯುತ್ತಮ ಸೇವೆಗಳ ಮೂಲಕ ಎಲ್ಲರ ಗಮನ ಸೆಳೆದಿದೆ ಎಂದು   ಕುಂದಾಪುರದ ರಾಜೀವ್ ಕೋಟಿಯನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ಇಲ್ಲಿನ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮಲೇಬೆನ್ನೂರು ಲಯನ್ಸ್ ಕ್ಲಬ್‌ನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿ ಅವರು ಮಾತನಾಡಿದರು.  ಈ ಕ್ಲಬ್ಬಿನ ಹಿರಿಯ ಸದ್ಯರಾಗಿರುವ ಡಾ. ಟಿ. ಬಸವರಾಜ್ ಅವರು ಜಿಲ್ಲಾ ಲಯನ್ಸ್ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿಶೇಷ ಯೋಜನೆಗಳ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆಂದು ಶ್ಲ್ಯಾಘಿಸಿದರು. 1917 ರಲ್ಲಿ ಸ್ಥಾಪಿತವಾದ ಲಯನ್ಸ್‌ ಕ್ಲಬ್ ಜಗತ್ತಿನಲ್ಲಿ 50 ಸಾವಿರ ಕ್ಲಬ್‌ಗಳನ್ನು ಹಾಗೂ 14 ಲಕ್ಷ ಸದಸ್ಯರನ್ನು ಹೊಂದಿದೆ ಎಂದರು. 

ಲಯನ್ಸ್ ಮಾಜಿ ಗೌರ್ನರ್ ಡಾ.ಟಿ. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ವರ್ತಕ ಚಿಟ್ಟಕ್ಕಿ ನಾಗರಾಜ್ ಕಾರ್ಯದರ್ಶಿಯಾಗಿ, ಬಟ್ಟೆ ಅಂಗಡಿ ಸಿರಿಗೆರೆ ಸದ್ದಪ್ಪ ಮತ್ತು ಖಜಾಂಚಿಯಾಗಿ ಪ್ರಗತಿ ಪರ ರೈತ ಭರಮಳ್ಳಿ ಮಂಜುನಾಥ ಅವರು ಅಧಿಕಾರ ವಹಿಸಿಕೊಂಡರು. ಲಯನ್ಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಎನ್.ಜಿ. ಶಿವಾಜಿ ಪಾಟೀಲ್ ಅವರು ತಮ್ಮ ಅವಧಿಯಲ್ಲಿನ ಸೇವಾ ಕಾರ್ಯಕ್ರಮಗಳನ್ನು ಸಭೆಯ ಗಮನಕ್ಕೆ ತಂದರು. 

ಲಯನ್ಸ್ ಮಾಜಿ ರಾಜ್ಯಪಾಲ ಎ.ಆರ್. ಉಜ್ಜನಪ್ಪ, ಬೆಳ್ಳೂಡಿ ಶಿವಕುಮಾರ್, ಮಲೇಬೆನ್ನೂರು ಲಯನ್ಸ್ ಕ್ಲಬ್‌ನ ಡಾ.ಹೆಚ್. ಜೆ. ಚಂದ್ರಕಾಂತ್, ಓ.ಜಿ ರುದ್ರಗೌಡ್ರು, ಹೆಚ್. ಜಿ. ಚಂದ್ರಶೇಖರ್, ಎನ್.ಜಿ. ಬಸವನಗೌಡ್ರು, ಇ.ಎಂ. ಮರುಳಸಿದ್ದಪ್ಪ,  ಎನ್, ಶಿವನಗೌಡ್ರು, ಉಡೇದರ ಸಿದ್ದೇಶ್, ಶ್ರೀಮತಿ ಪಾರ್ವತಮ್ಮ, ಶ್ರೀಮತಿ ರೂಪಾ ಪಾಟೀಲ್, ಲಯನ್ಸ್ ಶಾಲಾ ಮುಖ್ಯ ಶಿಕ್ಷಕ    ಚಂದ್ರಶೇಖರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಸಮಾರಂಭದಲ್ಲಿ ಶಾಸಕ ಬಿ.ಪಿ. ಹರೀಶ್, ಬೆಣ್ಣೆಹಳ್ಳಿ ಸಿದ್ದೇಶ್, ಕೆ.ಪಿ. ಗಂಗಾಧರ್, ಎ. ಅರೀಫ್ ಅಲಿ, ಚಿಟ್ಟಕ್ಕಿ ರಮೇಶ್, ಮಹಾಂತೇಶ್ ಸ್ವಾಮಿ, ಶಿಕ್ಷಕ ಎಫ್.ಕೆ. ಕುಮಾರ್ ಸೇರಿದಂತೆ  ಇತರರು ಉಪಸ್ಥಿತರಿದ್ದರು.

error: Content is protected !!