ವಸತಿ ಶಾಲೆಗಳಲ್ಲಿ ಖಾಲಿ ಇರುವ ತರಗತಿಗಳ ಸ್ಥಾನಗಳಿಗೆ ಪ್ರವೇಶ ಪರೀಕ್ಷೆ

ದಾವಣಗೆರೆ, ಜೂ. 25- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು  ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 ಪ್ರವೇಶ ಪರೀಕ್ಷೆಯನ್ನು ಇದೇ ದಿನಾಂಕ 28 ರಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಹರಿಹರ ತಾಲ್ಲೂಕಿನ ದೇವರಬೆಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವ) ಯಲ್ಲಿ ನಡೆಸಲಾಗುವುದು.

 ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಹಿಂದಿನ ಶೈಕ್ಷಣಿಕ ತರಗತಿಯ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಪಠ್ಯಕ್ರಮವನ್ನು ಆಧರಿಸಿದ್ದು, 7, 8 ಮತ್ತು 9 ನೇ ತರಗತಿ ದಾಖಲಾತಿಗೆ ನಡೆಸುವ ಪರೀಕ್ಷೆ ಪ್ರಶ್ನೆ ಪತ್ರಿಕೆಯು ಆಂಗ್ಲ  ಭಾಷೆಯಲ್ಲಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನೋಡೆಲ್ ಅಧಿಕಾರಿಗಳಾದ ಚನ್ನಗಿರಿಯ ಸುಭದ್ರ ವಿ.ಗಣಾಚಾರಿ ಪ್ರಾಂಶುಪಾಲರು ಮೊ.ಸಂ:9663121419, ಹೊನ್ನಾಳಿಯ-ನ್ಯಾಮತಿಯ ಹಸನ್ ಸಾಬ್ ಸೋಮಲಾಪುರ ಪ್ರಾಂಶುಪಾಲರು ಮೊ.ಸಂ: 9535481234, ದಾವಣಗೆರೆಯ ಮೊದೋಬ ನಾಯಕ್ ಪ್ರಾಂಶುಪಾಲರು ಮೊ.ಸಂ: 9916576233, ಹರಿಹರದ ಅರುಣ್ ವಿರಕ್ತಮಠ ಪ್ರಾಂಶುಪಾಲರು ಮೊ.ಸಂ:7892756358, ಜಗಳೂರಿನ ಅಮರೇಶ ಪ್ರಾಂಶುಪಾಲರು ಮೊ.ಸಂ: 9110482988 ಸಂಪರ್ಕಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.

error: Content is protected !!