ಹರಪನಹಳ್ಳಿ, ಜೂ.25- ಇತ್ತೀಚಿನ ದಿನ ಮಾನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿ ಲೆಗಳು ಹೆಚ್ಚಾಗುತ್ತಿದ್ದು, ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮತ್ತಿಹಳ್ಳಿ ಅಜ್ಜಣ್ಣ ವಕೀಲರು ಹೇಳಿದರು.
ಪಟ್ಟಣದ ನಗರ ಮನೋರಂಜನಾ ಕೇಂದ್ರ ಮತ್ತು ದಾವಣಗೆರೆಯ ಎಸ್.ಎಸ್.ನಾರಾಯಣ ಆರ್ಟ್ ಸೆಂಟರ್ ಇವರ ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ಸಾಮಾನ್ಯರು ಇಂತಹ ಉಚಿತ ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಎಸ್.ಎಸ್.ನಾರಾಯಣ ಹೃದಯಾಲ ಯದ ಸಿಬ್ಬಂದಿ ವರ್ಗದವರು ತಪಾಸಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಎಸ್.ಎಸ್.ನಾರಾಯಣ ಹೃದಯಾಲಯದ ವೈದ್ಯಾಧಿಕಾರಿಗಳಾದ ಡಾ. ಗುರುರಾಜ್, ನಗರ ಮನೋರಂಜನಾ ಕೇಂದ್ರದ ಕಾರ್ಯದರ್ಶಿ ಸಿ.ವೆಂಕಟೇಶ್, ನಿರ್ದೇಶಕರುಗಳಾದ ಪಿ.ವೀರೇಶ್ ಗೌಡ, ಡಿಶ್ ವೆಂಕಟೇಶ್, ಹೆಚ್.ಎ.ವೇಣುಗೋಪಾಲ, ರಾಮಪ್ರಸಾದ್ ಗಾಂಧಿ, ಇಟಗಿ ಚಂದ್ರಪ್ಪ ಹಾಗೂ ವ್ಯವಸ್ಥಾಪಕರಾದ ಹೆಚ್.ತಿಂದಪ್ಪ, ಪಕ್ಕೀರಪ್ಪ ಸೇರಿದಂತೆ ಸರ್ವಸದಸ್ಯರು ಭಾಗವಹಿಸಿದ್ದರು.