ಅವಿನಾಶ್‌ರಾವ್‌ಗೆ ಚಿನ್ನದ ಪದಕ

ಅವಿನಾಶ್‌ರಾವ್‌ಗೆ ಚಿನ್ನದ ಪದಕ

ದಾವಣಗೆರೆ, ಜೂ.23- ದೇಶದ ಯು.ಪಿ.ಎಸ್.ಸಿ. ಟಾಪರ್‌ಗಳಲ್ಲೊಬ್ಬರಾದ ಹಾಗೂ ಕರ್ನಾಟಕದ ಪ್ರಥಮ ರಾಂಕ್ ಪಡೆದಿರುವ ನಗರದ ಅವಿನಾಶ್ ವಿ.ರಾವ್ ಅವರು ಪ್ರಸಕ್ತ ಸಾಲಿನ  ರಾಷ್ಟ್ರಮಟ್ಟದ ಐ.ಎಫ್.ಎಸ್. ತರಬೇತಿಯಲ್ಲಿನ ಅತ್ಯುತ್ತಮ ಸಂಶೋಧನೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.

ನವದೆಹಲಿಯಲ್ಲಿ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜಯಶಂಕರ್ ಅವರಿಂದ ಚಿನ್ನದ ಪದಕ ಪಡೆದರು. ಅವಿನಾಶ್,  ಹಿರಿಯ ಹೋಟೆಲ್ ಉದ್ಯಮಿ ಕೆ.ವಿ. ಆನಂದ್ ರಾವ್ ಅವರ ಮೊಮ್ಮಗ ಹಾಗೂ ವಿಠಲರಾವ್, ಸ್ಮಿತಾ ರಾವ್ ಅವರ ಸುಪುತ್ರರು. ಅವಿನಾಶ್ ರಾವ್ ಗೆ ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಅಭಿನಂದನೆ ಹೇಳಿದ್ದಾರೆ.

error: Content is protected !!