ರಾಣೇಬೆನ್ನೂರು, ಜೂ.22- ಶಹರದ ಚೋಳಮರ ಡೇಶ್ವರ ನಗರದ ಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಶಾಲಾ ವ್ಯವಸ್ಥಾಪಕ ಚನ್ನಬಸಪ್ಪ ಮಾತನಾಡಿ, ಪ್ರತಿ ದಿನ ಯೋಗ ಮಾಡುವುದರಿಂದ ತಾಳ್ಮೆ, ಶಾಂತಿ, ಜ್ಞಾನ, ಉತ್ತಮ ಆರೋಗ್ಯ, ಉತ್ತಮ ಬೆಳವಣಿಗೆ ಹೀಗೆ ಹಲವಾರು ಉಪಯೋಗಗಳನ್ನು ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಸಿ.ಎಸ್, ಆಶಾ, ದೀಪಾ, ಗೀತಾ, ಪುಷ್ಪಾ, ಚೈತ್ರಾ, ದುರ್ಗಮ್ಮ ಹಾಗೂ ನಾಗೇಂದ್ರ, ಪ್ರವೀಣ ಮತ್ತಿತರರು ಪಾಲ್ಗೊಂಡಿದ್ದರು.
January 15, 2025