ಹರಿಹರ, ಜು. 22- ನಗರದ ತುಂಗಭದ್ರಾ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಶಿವಾನಂದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೆಚ್. ಸುನೀತಾ ಘೋಷಣೆ ಮಾಡಿದರು.
ನಗರದ ತುಂಗಭದ್ರಾ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಡಿ. ಹೇಮಂತರಾಜ್, ಜಿ.ಎಸ್. ಚನ್ನಬಸಪ್ಪ, ಸೈಯದ್ ಇಫ್ತಿಕಾರ್ ಆಹ್ಮದ್, ಬಿ. ಮಂಜಪ್ಪ, ಎಂ. ಹನುಮಂತಪ್ಪ, ಪಿ. ತಿಮ್ಮಣ್ಣ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಎಲ್.ಪಿ.ಮಮತಾ, ಎ.ಬಿ. ಗಂಗಮ್ಮ ಹಾಗೂ ವ್ಯವಸ್ಥಾಪಕ ಶರತ್ ಹಾಗೂ ಇತರರು ಹಾಜರಿದ್ದರು.