ದಾವಣಗೆರೆ, ಜೂ.22- ಧಾರವಾಡ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿ ಯೇಷನ್ ವತಿಯಿಂದ ಹುಬ್ಬಳ್ಳಿ ಶತಾಬ್ದಿ ರೈಲ್ವೆ ಭವನದಲ್ಲಿ ಜರುಗಿದ ರಾಜ್ಯಮಟ್ಟದ ಸೀನಿಯರ್ ಪವರ್ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದ ಮುನ್ಸಿಪಲ್ ಸ್ಪೋರ್ಟ್ ಕ್ಲಬ್ನ ಕ್ರೀಡಾಪಟು ಎನ್.ಶ್ವೇತಾ ದ್ವಿತೀಯ ಸ್ಥಾನ ಪಡೆದಿದ್ದಾರೆ.
ದೊಡ್ಡಬಾತಿ ಗ್ರಾಮದ ನಿಂಗಪ್ಪ-ಮಂಗಳಮ್ಮ ಮಡಿವಾಳರ ಪುತ್ರಿ ಶ್ವೇತಾ, ಪಂದ್ಯಾವಳಿಯಲ್ಲಿ 76 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ, ಸ್ಕ್ವಾಟ್ನಲ್ಲಿ 192.5 ಕೆ.ಜಿ., ಬೆಂಚ್ 95 ಕೆ.ಜಿ., ಡೆಡ್ ಲಿಫ್ಟ್ 125 ಕೆ.ಜಿ. ಒಟ್ಟು 410 ಕೆ.ಜಿ ಭಾರವನ್ನು ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದ್ದಾರೆ. ಅಲ್ಲದೇ ಸ್ಕ್ವಾಟ್ನಲ್ಲಿ 192.5 ಕೆ.ಜಿ. ಎತ್ತಿ ರಾಜ್ಯದಲ್ಲಿ ಹೊಸ ದಾಖಲೆ ಮಾಡಿರುತ್ತಾರೆ. ಕೋಚ್ ಕೆ.ಜಿ.ಪ್ರವೀಣ್ಕುಮಾರ್ ಅಭಿನಂದಿಸಿದ್ದಾರೆ.