ದಾವಣಗೆರೆ, ಜೂ. 22 – ನಗರದ ಮಾಂಟೆಸೊರಿ ಶಾಲೆಯಲ್ಲಿ 9ನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗದ ಹುಟ್ಟು, ಬೆಳವಣಿಗೆ ಮಹತ್ವವನ್ನು ಪತಂಜಲಿ ಯೋಗ ಕೇಂದ್ರದ ಸಿ.ನಾರಪ್ಪ ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಭಾಕರ್ ಅವರು ಮಕ್ಕಳಿಂದ ಯೋಗ ಪ್ರದರ್ಶನ ಮಾಡಿಸಿದರು. ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಮಲ್ಲಮ್ಮ ಅವರು ಅತಿಥಿಗಳನ್ನು ಗೌರವಿಸಿದರು. ಮುಖ್ಯೋಪಾಧ್ಯಾಯ ಫರ್ಹಾನ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಾದ ರಶ್ಮಿ, ಕೀರ್ತನ ಮತ್ತು ಸಾನ್ಸಿ ಮತ್ತಿತರರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
January 13, 2025