ದಾವಣಗೆರೆ, ಜೂ.22- ನಗರದ ಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟಿಗಟ್ಟಲೇ ಹಣವನ್ನು ಠೇವಣಿದಾರರಿಗೆ ಮೋಸ ಮಾಡಿದ್ದು, ಸಿಐಡಿ ಪೊಲೀಸರಿಂದ ತನಿಖೆ ನಡೆಯುತ್ತಿದ್ದರೂ ಇದ್ದಕ್ಕಿದ್ದಂತೆ ಸಹಕಾರ ಇಲಾಖೆ ಚುನಾವಣೆ ಘೋಷಣೆ ಮಾಡಿರುವುದು ಸಮಂಜಸವಲ್ಲ ಎಂದು ಸೊಸೈಟಿ ಠೇವಣಿದಾರರ ಸಂಘ ದೂರಿದೆ.
ಈಗಾಗಲೇ ಕಳೆದ 10ರಿಂದ ಚುನಾವಣಾ ಪ್ರಕ್ರಿಯ ಆರಂಭವಾಗಿದ್ದು, ಇದೇ ದಿನಾಂಕ 25ರಂದು ಚುನಾವಣೆ ನಡೆಯಲಿದೆ. ಸೊಸೈಟಿಯಲ್ಲಿ ಸುಮಾರು 2000 ಜನ ಷೇರುದಾರರಿದ್ದು, ಕೇವಲ 213 ಜನ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಿದ್ದಾರೆ. ದುರುದ್ಧೇಶದಿಂದ ಕೂಡಿರುವ ಈ ದೋಷಪೂರಿತ ಮತದಾರರ ಪಟ್ಟಿ ತಯಾರಿಸಿ ಠೇವಣಿದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಠೇವಣಿದಾರರ ಸಂಘದ ಅಧ್ಯಕ್ಷ ಎಂ.ಬಿ.ಜಗನ್ನಾಥರಾವ್ ಆರೋಪಿಸಿ ದ್ದಾರೆ. ಈ ಸಂಬಂಧ ವೇದಿಕೆ ಸದಸ್ಯರು ಬೆಂಗಳೂರಿನಲ್ಲಿರುವ ಸಹಕಾರ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.