ದಾವಣಗೆರೆ, ಜೂ. 22- ನಗರದ ಜೇನುಗೂಡು ಮಹಿಳಾ ಸಮಾಜದಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಮಾಜದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೀನಾ ಪ್ರಥಮ, ಮಮತಾ ಕೊಟ್ರೇಶ್, ತೃತೀಯ ಬಹುಮಾನವನ್ನು ಪೂರ್ಣ ಪಡೆದಿದ್ದಾರೆ. ಜೇನುಗೂಡು ಮಹಿಳಾ ಸಮಾಜದ ಅಧ್ಯಕ್ಷೆ ಸುಜಾತ ನಾಗೇಶ್, ಪದಾಧಿಕಾರಿಗಳಾದ ಮಧು ಉಮೇಶ್, ಕೊಟ್ರಮ್ಮ ಮುರುಗೇಶ್, ವಿದ್ಯಾ ಭಾಸ್ಕರ್, ವಿಜಯ ವೀರೇಂದ್ರ, ಸಮಾಜದ ಸದಸ್ಯರು ಭಾಗವಹಿಸಿದ್ದರು.
January 15, 2025