ಟಿಪ್ಪರ್ ಲಾರಿ ಹರಿದು ಬಾಲಕಿ ಸಾವು

ಟಿಪ್ಪರ್ ಲಾರಿ ಹರಿದು ಬಾಲಕಿ ಸಾವು

 ದಾವಣಗೆರೆ, ಜೂ. 21 – ರಸ್ತೆ ಅಪಘಾತದಲ್ಲಿ ಎರಡು ವರ್ಷದ ಬಾಲಕಿ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ   ಹಳೇ ಕುಂದುವಾಡದಲ್ಲಿ ನಡೆದಿದೆ. ಕುಂದುವಾಡ ಗ್ರಾಮದ ಗಣೇಶ್ ಪುತ್ರಿ ಚರಸ್ವಿ ಸಾವಿಗೀಡಾದ ನತದೃಷ್ಟೆ.

ಅಂಗನವಾಡಿ ಮುಗಿಸಿ ಮಧ್ಯಾಹ್ನ ತನ್ನ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ ಬಾಲಕಿ ಮೇಲೆ ಕೆಎ 17 ಡಿ 5017  ಸಂಖ್ಯೆಯ ಟಿಪ್ಪರ್ ಲಾರಿ ಹರಿದಿದೆ. ಚಕ್ರ ತಲೆ ಮೇಲೆ ಹರಿದ ರಭಸಕ್ಕೆ ಬಾಲಕಿ ತೀವ್ರವಾಗಿ ಗಾಯ ಗೊಂಡು ಮೃತಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. 

ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿದ ಪರಿಣಾಮ ಬಾಲಕಿ ಜೀವ ಬಲಿಯಾಗಿದೆ. ಬಾಲಕಿಯ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಕೆಲ ಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರು ಭೇಟಿ ನೀಡಿದ್ದರು.

error: Content is protected !!