ಹರಿಹರ ನಗರಸಭೆ ಅಧ್ಯಕ್ಷರಾಗಿ ನಿಂಬಕ್ಕ ಆಯ್ಕೆ ಸಾಧ್ಯತೆ

ಹರಿಹರ ನಗರಸಭೆ ಅಧ್ಯಕ್ಷರಾಗಿ ನಿಂಬಕ್ಕ ಆಯ್ಕೆ ಸಾಧ್ಯತೆ

ಹರಿಹರ, ಜೂ.21 – ನಗರಸಭೆ ಅಧ್ಯಕ್ಷ ರಾಗಿದ್ದ ಶಾಹೀನಾಬಾನು ದಾದಾಪೀರ್ ನೀಡಿರುವ ರಾಜೀನಾಮೆ ಅಂಗೀ ಕಾರ ಆಗಿದ್ದು, ಮುಂದಿನ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್‌ನ ನಿಂಬಕ್ಕ ಚಂದಪೂರ್  ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಕೆ.ಜಿ. ಸಿದ್ದೇಶ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ನಗರಸಭೆಯ ಸದಸ್ಯರಾಗಿ ಜೆಡಿಎಸ್ ಪಕ್ಷದಿಂದ 15,  ಕಾಂಗ್ರೆಸ್ ಪಕ್ಷದಿಂದ 10,  ಬಿಜೆಪಿ ಪಕ್ಷದಿಂದ 4 ಮತ್ತು ಪಕ್ಷೇತರರು 2 ಸೇರಿದಂತೆ ಒಟ್ಟು 31 ಸದಸ್ಯರು ಆಯ್ಕೆಯಾಗಿದ್ದಾರೆ. ಸ್ಪಷ್ಟ ಬಹುಮತವಿಲ್ಲದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರ ಹಂಚಿಕೆ ಮಾಡಿಕೊಂಡಿವೆ.

ಕಳೆದ ಜೂ. 5 ರಂದು ಶಾಹೀನಾಬಾನು ರಾಜೀನಾಮೆ ನೀಡಿದ್ದು, ಅದು ಜೂ.16ರಂದು ಅಂಗೀಕಾರವಾಗಿದೆ. ಮುಂದಿನ ಅವಧಿಗೆ ಚುನಾ ವಣಾ ದಿನಾಂಕವನ್ನು ಜಿಲ್ಲಾಧಿಕಾರಿಗಳು ಘೋಷಣೆ ಮಾಡಬೇಕಿದೆ.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಕವಿತಾ ಮಾರುತಿ, ಉಷಾ ಮಂಜುನಾಥ್, ಲಕ್ಷ್ಮಿ ಮೋಹನ್, ನಿಂಬಕ್ಕ ಚಂದಪೂರ್ ಪೈಪೋಟಿ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಅಥವಾ
ಕೆ.ಜಿ. ಸಿದ್ದೇಶ್ ಹೆಸರು ಬಹಳ ಚಾಲ್ತಿಯಲ್ಲಿದ್ದವು. ಆದರೆ ನಾಗರತ್ನಮ್ಮನವರು ಲೋಕಾಯುಕ್ತ ಪ್ರಕರಣದಲ್ಲಿ ಸಿಲುಕಿದ್ದರಿಂದ
 8 ನೇ ವಾರ್ಡಿನ ಸಿದ್ದೇಶ್ ಅವರ ಹೆಸರು ಅಂತಿಮ ಆಗಬಹುದಾಗಿದೆ. ಕೊನೆಯ ಗಳಿಗೆಯಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ,
ನಿಂಬಕ್ಕ ಹಾಗೂ ಸಿದ್ದೇಶ್ ನಗರಸಭೆ ಗಾದಿಗೆ ಬರಲಿದ್ದಾರೆ.

error: Content is protected !!