ಯುನೈಟೆಡ್ ನ್ಯಾಷನಲ್ ಶಾಲೆಯಲ್ಲಿ ಯೋಗ ದಿನಾಚರಣೆ

ಯುನೈಟೆಡ್ ನ್ಯಾಷನಲ್ ಶಾಲೆಯಲ್ಲಿ ಯೋಗ ದಿನಾಚರಣೆ

ದಾವಣಗೆರೆ, ಜೂ. 21- ಸಮೃದ್ಧವಾದ ಜೀವನಕ್ಕಾಗಿ ಶಿಕ್ಷಣ ಹೇಗೆ ಮುಖ್ಯವಾಗಿದೆಯೋ ಹಾಗೆಯೇ ಸಮೃದ್ಧವಾದ ದೇಹಕ್ಕಾಗಿ ಯೋಗ ಸಹ ಅಷ್ಟೇ ಮುಖ್ಯವಾಗಿದೆ ಎಂದು ಯೋಗದ ಮಹತ್ವವನ್ನು ಯುನೈಟೆಡ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಎಂ. ವಾಸಿಂ ಪಾಷಾ ತಿಳಿಸಿದರು. ನಗರದ ಯುನೈಟೆಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅವರು ಮಾತನಾಡಿದರು.

ಶಾಲೆಯ ಶಿಕ್ಷಕ ಇಬ್ರಾಹಿಂ ಜಮಖಂಡಿ ಮಾತನಾಡಿ, ವಿಶ್ವಸಂಸ್ಥೆಯಲ್ಲಿ ಯೋಗವನ್ನು ಅಂತರರಾಷ್ಟ್ರೀಯ ದಿನವನ್ನಾಗಿ ಹೇಗೆ ಘೋಷಿಸಲಾಯಿತು ಮತ್ತು ಯೋಗ ಭಾರತದಲ್ಲಿ ಹೇಗೆ ಬೆಳವಣಿಗೆಯಾಯಿತು ಎಂಬುದರ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ತಾಜ್ ಪ್ಯಾಲೇಸ್  ಮ್ಯಾರೇಜ್ ಹಾಲ್ ಮಾಲೀಕ ಬಿ. ದಾದಾಪೀರ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ  ಯಾಸ್ಮೀನ್ ಬಾನು ಹಾಗೂ ಆಡಳಿತಾಧಿಕಾರಿ ಅಶ್ಫಕ್ ಅಹ್ಮದ್, ಶಾಲಾ ಸಂಯೋಜಕ ಶ್ರೀಮತಿ ಶರ್ಫುನ್ನೀಸ ಹಾಗೂ ಮುಖ್ಯಸ್ಥ ಶೋಯೆಬ್ ನಹಿಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!