ಗೊಂದಲ : ಗುದ್ದಲಿ ಪೂಜೆ ಮುಂದೂಡಿಕೆ

ಗೊಂದಲ : ಗುದ್ದಲಿ ಪೂಜೆ ಮುಂದೂಡಿಕೆ

ಮಲೇಬೆನ್ನೂರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಮಲೇಬೆನ್ನೂರು, ಜೂ. 20 – ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಮಂಜೂರಾಗಿದ್ದ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಮಂಗಳವಾರ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್‌ ಪೂರ್ವ ನಿಗದಿಯಂತೆ ಆಗಮಿಸಿದ್ದರು. ಆದರೆ ಎಸ್‌ಡಿಎಂಸಿ ಹಾಗೂ ಉಪಪ್ರಚಾರ್ಯರ ನಡುವಿನ ತಿಕ್ಕಾಟದಿಂದಾಗಿ ಗುದ್ದಲಿ ಪೂಜೆಗೆ ಗೊಂದಲ ಉಂಟಾಯಿತು. ಆಗ ಸಂಸದರು, ಶಾಸಕರು ನಿಮ್ಮ ಸಮಸ್ಯೆ ಬಗೆಹರಿಸಿಕೊಂಡು ಇಬ್ಬರು ಒಟ್ಟಾಗಿ ಬಂದು ಕರೆದಾಗ ನಾನು ಗುದ್ದಲಿ ಪೂಜೆಗೆ ಬರುತ್ತೇನೆ. ಈಗ ಪೂಜೆ ಮಾಡುವುದಿಲ್ಲ ಎಂದು ಹೇಳಿದರು.

ಆಗ ಕಂಪ್ಯೂಟರ್‌ ಕೇಂದ್ರವನ್ನು ಉದ್ಘಾಟಿಸಿದ ಸಂಸದರು, ಶಾಸಕರು ನಂತರ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ತೆರಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್‌, ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್‌, ಬಿ.ಮಂಜುನಾಥ್‌, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್‌, ಬಿ.ಸುರೇಶ್‌, ಪಿ.ಆರ್‌.ರಾಜು, ಎ.ಕೆ. ಲೋಕೇಶ್‌, ತಾ.ಪಂ. ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಕರು ಈ ವೇಳೆ ಹಾಜರಿದ್ದರು. ಇದೇ ವೇಳೆ ಸಂಸದರು, ಶಾಸಕರನ್ನು  ಶ್ರೀ ಬೀರಲಿಂಗೇಶ್ವರ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

error: Content is protected !!