ಅಂತರರಾಷ್ಟ್ರೀಯ ಯೋಗ ದಿನಾಚರಣೆ ನೋಂದಣಿಗೆ ಅವಕಾಶ

ದಾವಣಗೆರೆ, ಜೂ. 8 –  ಜಿಲ್ಲಾ ಸಂಯುಕ್ತ ಪ್ರಾದೇಶಿಕ ಕೇಂದ್ರದ (ಸಿ.ಆರ್.ಸಿ) ವತಿಯಿಂದ ವಿಕಲಚೇತನರು ಹಾಗೂ ವಿ.ಆರ್.ಡಬ್ಲ್ಯೂ/ಯು.ಆರ್.ಡಬ್ಲ್ಯೂ/ಎಂ.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಇದೇ ದಿನಾಂಕ 21ರಂದು ಸಿಕಂದರಬಾದ್‍ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ), ದೇವರಾಜ ಅರಸು ಬಡಾವಣೆ ‘ಬಿ’ ಬ್ಲಾಕ್ ಇಲ್ಲಿನ ಸಿಬ್ಬಂದಿಯಾದ ಕನಗ ಸಭಾಪತಿ ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ವಿವರಕ್ಕೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದಾವಣಗೆರೆ ಹಾಗೂ ದೂ.9445153327, 08192-233465ಗೆ ಸಂಪರ್ಕಿಸಬಹುದೆಂದು ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!