ಹಾರ, ತುರಾಯಿ, ಶಾಲು-ಶಲ್ಯಗಳ ಬದಲಿಗೆ ಉತ್ತಮ ಪುಸ್ತಕ ನೀಡಲು ಸಿಎಂ ಮತ್ತು ಸಚಿವರ ಕರೆ : ಸ್ವಾಗತಾರ್ಹ

ಚನ್ನಗಿರಿ,ಜೂ. 18 – ತಮ್ಮ ಮನೆ, ಕಛೇರಿ, ಸಭೆ- ಸಮಾರಂಭಗಳಲ್ಲಿ ಗೌರವದ ರೂಪದಲ್ಲಿ ನೀಡುವ ಹಾರ, ತುರಾಯಿ, ಶಾಲು-ಶಲ್ಯಗಳ ಬದಲಿಗೆ ಉತ್ತಮವಾದ ಪುಸ್ತಕಗಳನ್ನು ನೀಡಿ ಎಂದು ಕರೆ ನೀಡಿರುವ ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಯವರ ನಡೆಯು ಸ್ವಾಗತಾರ್ಹವಾಗಿದೆ ಎಂದು ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಪುಸ್ತಕಗಳು ನಾಗರಿಕ ಸಂಸ್ಕೃತಿಯ ಜೀವಂತ ಪ್ರತೀಕವಾಗಿದ್ದು, ವ್ಯಕ್ತಿತ್ವದ ನಿರ್ಮಾಣಕ್ಕೆ ಸಹಾಯವಾಗಬಲ್ಲವು. ಮುಖ್ಯಮಂತ್ರಿ ಹಾಗೂ ಸಚಿವರ ಈ ಆದರ್ಶಣೀಯ ಕ್ರಮದಿಂದ ಯುವ ಬರಹಗಾರರಿಗೆ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹ, ಸಹಕಾರ ನೀಡಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ  ಎಲ್ಲಾ ಇಲಾಖೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಪುಸ್ತಕಗಳನ್ನೇ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಅಧಿಕೃತ ಆದೇಶವನ್ನು ಶೀಘ್ರವೇ ಹೊರಡಿಸಬೇಕು ಎಂದು ಮಧುಕುಮಾರ್ ಒತ್ತಾಯಿಸಿದ್ದಾರೆ.

error: Content is protected !!